ಸ್ವೀಪ್ ಶಾಟ್ ನೈಪುಣ್ಯದತ್ತ ವಿರಾಟ್ ಕೊಹ್ಲಿ ಚಿತ್ತ

ಶುಕ್ರವಾರ, 31 ಜುಲೈ 2015 (14:54 IST)
ವಿರಾಟ್ ಕೊಹ್ಲಿ ಕವರ್ ಡ್ರೈವ್‌ಗಳನ್ನು , ಫ್ಲಿಕ್‌ಗಳನ್ನು ಮತ್ತು ಶಕ್ತಿಶಾಲಿ ಪುಲ್‌ಗಳನ್ನು ಹೊಡೆಯುವಾಗ ನೋಡಲು ಆಕರ್ಷಕವಾಗಿರುತ್ತದೆ. ಆದರೆ ಅವರ ಬತ್ತಳಿಕೆಯಲ್ಲಿ ಸ್ವೀಪ್ ಶಾಟ್ ಮಿಸ್ ಆಗಿರುವುದು ಕಂಡುಬರುತ್ತದೆ.  ಶ್ರೀಲಂಕಾ ಸರಣಿ ಹತ್ತಿರವಿರುವಾಗ ಭಾರತದ ನಾಯಕ ಸ್ವೀಪ್ ಶಾಟ್‌ನಲ್ಲಿ ನೈಪುಣ್ಯ ಹೊಂದಲು ಎದುರುನೋಡುತ್ತಿದ್ದಾರೆ. ಈ ಸ್ವೀಪ್ ಶಾಟ್ ಕುರಿತು ಕಲಿಯುವುದಕ್ಕೆ ತಮ್ಮ ಬಾಲ್ಯದಲ್ಲಿ ಕೋಚ್ ಆಗಿದ್ದ ರಾಜ್ ಕುಮಾರ್ ಶರ್ಮಾ ಅವರನ್ನು ಮತ್ತೆ ಕಾಣಲು ಹೊರಟಿದ್ದಾರೆ.
 
ಅವರ ಬ್ಯಾಟಿಂಗ್ ತಾಂತ್ರಿಕವಾಗಿ ಸರಿಯಾಗಿದೆ. ಆದರೆ ಅವರು ಯಾವತ್ತೂ ಸ್ವೀಪ್ ಶಾಟ್ ಹೊಡೆಯುವುದಿಲ್ಲ. ಈಗ ಅವರು ಸ್ವೀಪ್ ಶಾಟ್‌ಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು ಅದರಲ್ಲಿ ನೈಪುಣ್ಯ ಗಳಿಸುವುದರಿಂದ ಸ್ಪಿನ್ನರ್‌ಗಳ ಮೇಲೆ ಪ್ರಭುತ್ವ ಸಾಧಿಸಬಹುದು ಎನ್ನುವುದು ಅವರ ಭಾವನೆಯಾಗಿದೆ ಎಂದು ಶರ್ಮಾ ಹೇಳಿದ್ದಾರೆ.
 
 ಕೊಹ್ಲಿ ಒಣ ಮತ್ತು ರಫ್ ಪಿಚ್‌ಗಳಿಗೆ ಕೇಳಿ ಸ್ಪಿನ್ನರ್‌ಗಳ ವಿರುದ್ಧ ಸ್ವೀಪ್ ಶಾಟ್ ಹೊಡೆಯುವುದನ್ನು ಸುಮಾರು  2ಗಂಟೆಗಳ ಕಾಲ ಅಭ್ಯಾಸ ಮಾಡಿದರು. ಆದರೆ ಅವರ ಶಾಟ್‌ಗಳಲ್ಲಿ ಮಿಶ್ರಿತ ಫಲಿತಾಂಶ ಕಂಡುಬಂದಿದೆ.  ಆಸ್ಟ್ರೇಲಿಯಾ ಸರಣಿಯಲ್ಲಿ ನಾಥನ್ ಲಯನ್ ಬೌಲಿಂಗ್‌ನಲ್ಲಿ ಅವರು ಸ್ವೀಪ್ ಶಾಟ್ ಅಳವಡಿಸಿಕೊಂಡ ಮೊದಲ ಲಕ್ಷಣಗಳು ಕಂಡುಬಂದಿವೆ.  ಎರಡೂ ಇನ್ನಿಂಗ್ಸ್‌ನಲ್ಲಿ ಅವರು ಶತಕ ಬಾರಿಸಿದರು ಎಂದು ಶರ್ಮಾ ಹೇಳಿದರು. 

ವೆಬ್ದುನಿಯಾವನ್ನು ಓದಿ