ಪತ್ನಿ ಅನುಷ್ಕಾ ಬಗ್ಗೆ ಮಾತನಾಡಿದವನ ಬೆವರಿಳಿಸಿದ ವಿರಾಟ್ ಕೊಹ್ಲಿ

ಸೋಮವಾರ, 18 ಜೂನ್ 2018 (08:25 IST)
ಮುಂಬೈ: ಪತ್ನಿ ಬಗ್ಗೆ ಇಲ್ಲ ಸಲ್ಲದ್ದು ಹೇಳಿದರೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಎಂತಹಾ ಸಿಟ್ಟು ಬರುತ್ತದೆ ಎಂದು ಎಲ್ಲರಿಗೂ ಗೊತ್ತಿರುವ ವಿಚಾರವೇ.

ಇದೀಗ ಟ್ವಿಟರ್ ನಲ್ಲಿ ಅನುಷ್ಕಾ ಕಾರ್ ನಿಂದ ಪ್ಲಾಸ್ಟಿಕ್ ಕವರ್ ಬಿಸಾಕುವ ವಿಡಿಯೋವನ್ನು ಪತ್ತೆ ಹಚ್ಚಿದ್ದ ವಿಡಿಯೋವನ್ನು ವಿರಾಟ್ ಶೇರ್ ಮಾಡಿದ್ದರು. ಈ ವಿಡಿಯೋ ಪ್ರಕಟಿಸಿದ್ದಕ್ಕೆ ವ್ಯಕ್ತಿಯೊಬ್ಬ ಕಾಮೆಂಟ್ ಮಾಡಿದ್ದು, ಇದು ಚೀಪ್ ಪಬ್ಲಿಸಿಟಿ ತಂತ್ರ ಎಂದು ಜರೆದಿದ್ದ.

ಇದಕ್ಕೆ ತಮ್ಮ ಆಂಗ್ರಿ ಸ್ಟೈಲ್ ನಲ್ಲೇ ಉತ್ತರಿಸಿರುವ ವಿರಾಟ್ ಇಂತಹದ್ದನ್ನು ನೇರವಾಗಿ ಹೇಳುವ ಧೈರ್ಯವಿಲ್ಲದವರಿಗೆ ಇಂತಹದ್ದೆಲ್ಲಾ ತಮಾಷೆ ಎನಿಸಬಹುದು. ಜನರಿಗೆ ಇತ್ತೀಚೆಗೆ ಎಲ್ಲಾ ವಿಚಾರಗಳೂ ಸಿಲ್ಲಿ ಎನಿಸುತ್ತವೆ. ಶೇಮ್’ ಎಂದು ಕೊಹ್ಲಿ ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ