ಅಫ್ಘಾನಿಸ್ತಾನ ವಿರುದ್ಧ ಹೊಸ ದಾಖಲೆ ನಿರ್ಮಿಸಿದ ಟೀಂ ಇಂಡಿಯಾ

ಶನಿವಾರ, 16 ಜೂನ್ 2018 (08:39 IST)
ಬೆಂಗಳೂರು: ಅಫ್ಘಾನಿಸ್ತಾನ ವಿರುದ್ಧ ಟೆಸ್ಟ್ ಪಂದ್ಯವಾಡಿದ ಟೀಂ ಇಂಡಿಯಾ ಹೊಸ ದಾಖಲೆಗಳನ್ನು ನಿರ್ಮಿಸಿದೆ. ಅವುಗಳ ಬಗ್ಗೆ ಇಲ್ಲಿದೆ ಒಂದು ಅವಲೋಕನ.

ಇದೇ ಮೊದಲ ಬಾರಿಗೆ ಟೆಸ್ಟ್ ಪಂದ್ಯವಾಡಲು ಇಳಿದಿರುವ ಅಫ್ಘಾನಿಸ್ತಾನ ಎರಡನೇ ದಿನಕ್ಕೆ ಸೋಲನಭಿವಿಸಿದೆ. ಈ ಮೂಲಕ ಉಪಖಂಡದ ಪಿಚ್ ನಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಒಂದೇ ದಿನಕ್ಕೆ ಅತೀ ಹೆಚ್ಚು ವಿಕೆಟ್ ಕಬಳಿಸಿದ ದಾಖಲೆ ಟೀಂ ಇಂಡಿಯಾ ಪಾಲಾಯ್ತು. ಒಂದೇ ಪಂದ್ಯದಲ್ಲಿ ಟೀಂ ಇಂಡಿಯಾ ಅಫ್ಘಾನಿಸ್ತಾನದ 24 ವಿಕೆಟ್ ಕಬಳಿಸಿದೆ. ಈ ಮೊದಲು ಕೊಲೊಂಬೋದಲ್ಲಿ ಇಂಗ್ಲೆಂಡ್ 22 ವಿಕೆಟ್ ಕಳೆದುಕೊಂಡು ಈ ಬೇಡದ ದಾಖಲೆ ಹೊಂದಿತ್ತು.

ಇದೇ ಮೊದಲ ಬಾರಿಗೆ ಟೆಸ್ಟ್ ಪಂದ್ಯವಾಡಲು ಇಳಿದ ಅಫ್ಘಾನ್ ತಂಡ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿಎರಡನೇ ದಿನದಲ್ಲಿ ಸೋಲು ಕಂಡ ಅವಮಾನ ಅನುಭವಿಸಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ