ಇನ್ ಸ್ಟಾಗ್ರಾಂ ಆದಾಯ ಬಗ್ಗೆ ಸ್ಪಷ್ಟನೆ ಕೊಟ್ಟ ವಿರಾಟ್ ಕೊಹ್ಲಿ

ಶನಿವಾರ, 12 ಆಗಸ್ಟ್ 2023 (17:42 IST)
ಮುಂಬೈ: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಪ್ರತೀ ಇನ್ ಸ್ಟಾಗ್ರಾಂ ಪೋಸ್ಟ್ ಗೆ 11.45 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎಂದು ವರದಿಯಾಗಿತ್ತು. ಇದರ ಬಗ್ಗೆ ಸ್ವತಃ ಕೊಹ್ಲಿಯೇ ಸ್ಪಷ್ಟನೆ ನೀಡಿದ್ದಾರೆ.

ಸಾಮಾನ್ಯವಾಗಿ ಇಂತಹ ವರದಿಗಳ ಬಗ್ಗೆ ಕೊಹ್ಲಿ ಪ್ರತಿಕ್ರಿಯೆ ನೀಡಲ್ಲ. ಆದರೆ ಇದೀಗ ಇನ್ ಸ್ಟಾಗ್ರಾಂ ಶೆಡ್ಯೂಲಿಂಗ್ ಟೂಲ್ ಹೂಪರ್ ಎಚ್ ಕ್ಯು ಕೊಹ್ಲಿ ಒಂದು ಪೋಸ್ಟ್‍ ಗೆ 11.45 ಕೋಟಿ ರೂ. ಚಾರ್ಜ್ ಮಾಡ್ತಾರೆ ಎಂದು ವರದಿ ಮಾಡಿತ್ತು. ಇದಕ್ಕೆ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ.

‘ನನಗೆ ಜೀವನದಲ್ಲಿ ಇದುವರೆಗೆ ಸಿಕ್ಕಿರುವ ಎಲ್ಲದಕ್ಕೂ ನಾನು ಅಭಾರಿಯಾಗಿರುವೆ. ಆದರೆ ಇದೀಗ ನನ್ನ ಸೋಷಿಯಲ್ ಮೀಡಿಯಾ ಗಳಿಕೆ ಹರಿದಾಡುತ್ತಿರುವ ಸುದ್ದಿಗಳೆಲ್ಲಾ ಸಂಪೂರ್ಣ ಸುಳ್ಳು’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ