ಕೊಹ್ಲಿ ಟೆಸ್ಟ್ ನಾಯಕ, ಧೋನಿ ಏಕ ದಿನ ನಾಯಕ: ಕಾದು ನೋಡಲು ಸೌರವ್ ಸಲಹೆ

ಬುಧವಾರ, 29 ಜುಲೈ 2015 (16:55 IST)
ವಿರಾಟ್ ಕೊಹ್ಲಿ ಟೆಸ್ಟ್ ನಾಯಕರಾಗಿ ಮತ್ತು ಧೋನಿ ಏಕದಿನ ಮತ್ತು ಟಿ 20 ನಾಯಕರಾಗಿ ಎರಡು ಸ್ವರೂಪದ ಕ್ರಿಕೆಟ್‌ನಲ್ಲಿ ರಾಷ್ಟ್ರೀಯ ತಂಡ ಹೇಗೆ ಕಾರ್ಯನಿರ್ವಹಿಸುತ್ತದೆನ್ನುವ ಕುತೂಹಲ ಕೆರಳಿಸಿದೆ ಎಂದು ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.

 ಆಸ್ಟ್ರೇಲಿಯಾ ಪ್ರವಾಸದ ಸಂದರ್ಭದಲ್ಲಿ ಧೋನಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಗೊಂಡಿದ್ದರು.  ದೀರ್ಘಾವಧಿ ಸ್ವರೂಪದ ಟೆಸ್ಟ್ ಕ್ರಿಕೆಟ್‌ಗೆ ಕೊಹ್ಲಿಗೆ ನಾಯಕತ್ವ ನೀಡಲಾಯಿತು ಮತ್ತು ಧೋನಿ ಏಕದಿನ ಪಂದ್ಯಗಳ ನಾಯಕತ್ವ ಉಳಿಸಿಕೊಂಡರು.  ಇಬ್ಬರು ನಾಯಕರ ಸಿದ್ಧಾಂತವು ಧೋನಿ ಟೆಸ್ಟ್ ಕ್ರಿಕೆಟ್‌ಗೆ ರಾಜೀನಾಮೆ ನೀಡಿದ್ದರಿಂದ ಸಂಭವಿಸಿದೆ.

 ಆದರೆ ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ ತಂಡಗಳಲ್ಲಿಯೂ ಇದೇ ವಿಧಾನ ಅನುಸರಿಸಲಾಗುತ್ತಿದೆ. ನೀವು ಜಯಗಳಿಸಿದರೆ ಈ ವಿಧಾನ ಕೆಲಸ ಮಾಡುತ್ತದೆ. ಜಯಗಳಿಸದಿದ್ದರೆ ಕೆಲಸ ಮಾಡುವುದಿಲ್ಲ ಎಂದು ಮಂಗಳವಾರ ಗಂಗೂಲಿ ಪ್ರಚಾರ ಕಾರ್ಯಕ್ರಮದಲ್ಲಿ ಹೇಳಿದರು.
 
 ಭಾರತದ ಹಿರಿಯ ಸ್ಪಿನ್ ಬೌಲರ್‌ಗಳಾದ ಹರ್ಭಜನ್ ಮತ್ತು ಅಮಿತ್ ಮಿಶ್ರಾ ಅವರ ಆಯ್ಕೆಯನ್ನು ಸಮರ್ಥಿಸಿಕೊಂಡರು.  ಯುವ ಪ್ರತಿಭೆಗಳ ಕೊರತೆಯ ಕಾರಣದಿಂದ ಅನುಭವಿ ಸ್ಪಿನ್ನರುಗಳನ್ನು ಆಯ್ಕೆ ಮಾಡಲಾಗಿತ್ತು. ಅನುಭವಿ ಮತ್ತು ಅನನುಭವಿ ನಡುವೆ ಯಾವುದೇ ಸಮಸ್ಯೆ ನನಗೆ ಕಾಣುವುದಿಲ್ಲ. ನೀವು ಆಡಿದಾಗ ಮಾತ್ರ ಅನುಭವ ಬರುತ್ತದೆ ಎಂದು ಗಂಗೂಲಿ ಹೇಳಿದರು. 

ವೆಬ್ದುನಿಯಾವನ್ನು ಓದಿ