ಎರಡನೇ ದಿನದಾಟದಲ್ಲಿ ವಿರಾಟ್ ಕೊಹ್ಲಿ ಮುರಿದ ದಾಖಲೆಗಳ ಪಟ್ಟಿ ಹೀಗಿದೆ

ಶುಕ್ರವಾರ, 11 ಅಕ್ಟೋಬರ್ 2019 (19:22 IST)
ಪುಣೆ: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ದ್ವಿತೀಯ ದಿನ ದ್ವಿಶತಕ ದಾಖಲಿಸಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಡಾನ್ ಬ್ರಾಡ್ಮನ್, ಸಚಿನ್ ತೆಂಡುಲ್ಕರ್ ಸೇರಿದಂತೆ ಹಲವರ ದಾಖಲೆಗಳನ್ನು ಪುಡಿಗಟ್ಟಿದ್ದಾರೆ.


ನಾಯಕನಾಗಿ ಅತೀ ಹೆಚ್ಚು 150 ಪ್ಲಸ್ ರನ್ ಗಳಿಸಿದ್ದ ಡಾನ್ ಬ್ರಾಡ್ಮನ್ ದಾಖಲೆ ಮುರಿದ ಕೊಹ್ಲಿ 7 ನೇ ದ್ವಿಶತಕ ಸಿಡಿಸಿದರು. 40 ಅಂತಾರಾಷ್ಟ್ರೀಯ ಶತಕ ಸಿಡಿಸಿದ ಈ ಸಾಧನೆ ಮಾಡಿದ ಮೊದಲ ಭಾರತೀಯ ನಾಯಕ ಮತ್ತು ಜಾಗತಿಕವಾಗಿ ರಿಕಿ ಪಾಂಟಿಂಗ್ ನಂತರ ದ್ವಿತೀಯ ನಾಯಕನೆನಿಸಿದರು.

7 ನೇ ದ್ವಿಶತಕ ಸಿಡಿಸುವುದರೊಂದಿಗೆ ಭಾರತದ ಪರ ಗರಿಷ್ಠ ದ್ವಿಶತಕ ಗಳಿಸಿದ್ದ ಸಚಿನ್ ತೆಂಡುಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ದಾಖಲೆಯನ್ನು ಮುರಿದರು. 254 ರನ್ ಗಳಿಸಿದ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ತಮ್ಮ ವೈಯಕ್ತಿಕ ಗರಿಷ್ಠ ರನ್ ಗಳಿಕೆಯನ್ನು ಉತ್ತಮಪಡಿಸಿದರು. ಇದಕ್ಕೂ ಮೊದಲು 243 ರನ್ ಗರಿಷ್ಠವಾಗಿತ್ತು.  26 ನೇ ಟೆಸ್ಟ್ ಶತಕ ಸಿಡಿಸಿದ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಶತಕಗಳ ಪಟ್ಟಿಯಲ್ಲಿ ಇಂಜಮಾಮ್ ಹಕ್ ದಾಖಲೆಯನ್ನು ಹಿಂದಿಕ್ಕಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ