ಟೆಸ್ಟ್ ಪಂದ್ಯ ಗೆದ್ದು ಬಂದ ವಿರಾಟ್ ಕೊಹ್ಲಿ ಬಳಗಕ್ಕೆ ಹೋಟೆಲ್ ನಲ್ಲಿ ಕಾದಿತ್ತು ಅಚ್ಚರಿ!

ಬುಧವಾರ, 8 ಮಾರ್ಚ್ 2017 (09:38 IST)
ಬೆಂಗಳೂರು:  ಆಸ್ಟ್ರೇಲಿಯಾ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯವನ್ನು ಗೆದ್ದ ರೀತಿ ನೋಡಿ ಟೀಂ ಇಂಡಿಯಾಕ್ಕೆ ಎಲ್ಲೆಡೆಯಿಂದ ಅಭಿನಂದನೆ ಹರಿದುಬರುತ್ತಿದೆ. ಆಟಗಾರರೂ ಅಷ್ಟೇ ಖುಷಿಯಾಗಿದ್ದಾರೆ.

 
ಡ್ರೆಸ್ಸಿಂಗ್ ರೂಂನಲ್ಲಿ ಸಂಭ್ರಮ ಮನೆ ಮಾಡಿತ್ತು. ಇದೇ ಖುಷಿಯಲ್ಲಿ ಸಂಜೆ ತಾವು ವಾಸ್ತವ್ಯವಿದ್ದ ಹೋಟೆಲ್ ಗೆ ತೆರಳಿದಾಗ ಕ್ರಿಕೆಟಿಗರಿಗೆ ಅಚ್ಚರಿಯೊಂದು ಕಾದಿತ್ತು. ಹೋಟೆಲ್ ಸಿಬ್ಬಂದಿ ಕ್ರಿಕೆಟಿಗರಿಗಾಗಿ ಸರ್ಪ್ರೈಸ್ ರೆಡಿ ಮಾಡಿದ್ದರು. ಅಂತಹದ್ದೇನಿತ್ತು ಅಲ್ಲಿ?

ಹೋಟೆಲ್ ಸಿಬ್ಬಂದಿ ಕ್ರಿಕೆಟಿಗರನ್ನು ವಿಶೇಷವಾಗಿ ಸ್ವಾಗತಿಸಿದರು. ಅಲ್ಲಿ ದೊಡ್ಡದೊಂದು ಕೇಕ್ ಟೀಂ ಇಂಡಿಯಾ ಹುಡುಗರಿಗಾಗಿ ಕಾಯುತ್ತಿತ್ತು. ಕೊಹ್ಲಿ, ಕೆಎಲ್ ರಾಹುಲ್ ಸೇರಿದಂತೆ ಕ್ರಿಕೆಟಿಗರು ಅದನ್ನು ಕಟ್ ಮಾಡಿ ಪರಸ್ಪರ ಕೇಕ್ ತಿನಿಸಿ ಗೆಲುವಿನ ಸಂಭ್ರಮ ಆಚರಿಸಲು ಹೋಟೆಲ್ ಸಿಬ್ಬಂದಿ ನೆರವಾದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ