ವೆಜಿಟೇರಿಯನ್ ವಿರಾಟ್ ಕೊಹ್ಲಿ ಚಿಕನ್ ತಿಂದರೇ? ವೈರಲ್ ಆದ ಫೋಟೋ!
ಇದನ್ನು ಅವರೇ ಎಷ್ಟೋ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ನನ್ನ ಆರೋಗ್ಯದ ದೃಷ್ಟಿಯಿಂದ ಸಂಪೂರ್ಣ ಸಸ್ಯಾಹಾರಿಯಾಗಿದ್ದೇನೆ ಎಂದಿದ್ದರು. ನಾನ್ ವೆಜ್ ಆಹಾರ ಸೇವಿಸುವುದರಿಂದ ಅಸಿಡಿಟಿ ಅಂಶ ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ ತ್ಯಜಿಸಿದ್ದಾಗಿ ಹೇಳಿದ್ದರು.
ಆದರೆ ಇದೀಗ ವಿರಾಟ್ ಕೊಹ್ಲಿ ಸೋಷಿಯಲ್ ಮೀಡಿಯಾದಲ್ಲಿ ಮಾಕ್ ಚಿಕನ್ ಟಿಕ್ಕಾ ಸೇವಿಸುತ್ತಿರುವುದಾಗಿ ಫೋಟೋವೊಂದನ್ನು ಪ್ರಕಟಿಸಿರುವುದು ಎಲ್ಲರೂ ಹುಬ್ಬೇರುವಂತೆ ಮಾಡಿದೆ. ಹಾಗಿದ್ದರೆ ಕೊಹ್ಲಿ ಡಯಟ್ ಗೆ ಮೋಸ ಮಾಡಿದ್ರಾ? ಎಂದು ಹಲವರು ಪ್ರಶ್ನಿಸಿದ್ದಾರೆ.
ಆದರೆ ಕೊಹ್ಲಿ ಸೇವಿಸಿದ್ದು ನಿಜವಾದ ಚಿಕನ್ ಟಿಕ್ಕಾ ಅಲ್ಲಾ. ಅವರೇ ಹೇಳುವಂತೆ ಮಾಕ್ ಚಿಕನ್ ಟಿಕ್ಕಾ. ಅಂದರೆ ಚಿಕನ್ ಟಿಕ್ಕಾವನ್ನೇ ಹೋಲುವ ಸಸ್ಯಾಹಾರಿ ಆಹಾರ. ಆದರೆ ಅರೆಕ್ಷಣ ನೆಟ್ಟಿಗರು ಕೊಹ್ಲಿ ವೆಜಿಟೇರಿಯನ್ ಎಂದು ನಾನ್ ವೆಜ್ ಸೇವಿಸುತ್ತಿದ್ದಾರೆ ಎಂದು ಕನ್ ಫ್ಯೂಸ್ ಆದರು.