ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಹೀನಾಯ ಸೋಲಿನ ಬಳಿಕ ಎಚ್ಚೆತ್ತುಕೊಂಡ ನಾಯಕ ಕೊಹ್ಲಿ ನಾಲ್ಕನೇ ಟೆಸ್ಟ್ ನಲ್ಲಿ ಬ್ಯಾಟಿಂಗ್ ನಲ್ಲಿ ಪ್ರಯೋಗ ಮಾಡಲು ಹೋದರು. ಆದರೆ ಅಲ್ಲಿಯೂ ಕೈ ಸುಟ್ಟುಕೊಳ್ಳಬೇಕಾಯಿತು.
ಮೊದಲ ಇನಿಂಗ್ಸ್ ನಲ್ಲಿ ಆಲ್ ರೌಂಡರ್ ರವೀಂದ್ರ ಜಡೇಜಾಗೆ ಬಡ್ತಿ ನೀಡಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿಸಿದ ಕೊಹ್ಲಿ ತಮ್ಮ ನಿರ್ಧಾರಕ್ಕೆ ತಾವೇ ಬೆಲೆ ತೆರುವಂತಾಯಿತು. ಕೆಳ ಕ್ರಮಾಂಕದಲ್ಲಿ ಅಬ್ಬರಿಸುವ ಜಡೇಜಾಗೆ ಒಮ್ಮೆಲೇ ಅಗ್ರ ಕ್ರಮಾಂಕದ ಜವಾಬ್ಧಾರಿ ಸಿಕ್ಕಾಗ ಅದನ್ನು ನಿಭಾಯಿಸಲು ಅವರು ವಿಫಲರಾದರು.
ಇದರಿಂದಾಗಿ ಕೊಹ್ಲಿ ನಿರ್ಧಾರ ಫ್ಲಾಪ್ ಆಯಿತು. ಆದರೆ ಅದೃಷ್ಟವಶಾತ್ ಶ್ರಾದ್ಧೂಲ್ ಠಾಕೂರ್ ಮಿಂಚಿದ್ದರಿಂದ ಭಾರತದ ಮಾನ ಉಳಿಯಿತು.