ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿಯ ಕಳಪೆ ಫಾರಂ ಆಸ್ಟ್ರೇಲಿಯಾ ಎ ವಿರುದ್ಧ ಪಂದ್ಯದಲ್ಲೂ ಮುಂದುವರಿದು ಆತಿಥೇಯರು ಕೇವಲ 135ರನ್ಗೆ ಎಲ್ಲಾ ವಿಕೆಟ್ ಕಳೆದುಕೊಂಡಿದೆ. ಆಸ್ಟ್ರೇಲಿಯಾ ಎ ವಿರುದ್ಧ ಎರಡನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುವುದಕ್ಕಾಗಿ ಆಡಿದ್ದ ವಿರಾಟ್ ಕೊಹ್ಲಿ 42 ಎಸೆತಗಳನ್ನು ಆಡಿ 16 ರನ್ ಮಾಡುವ ಮೂಲಕ ಅಭಿಮಾನಿಗಳನ್ನು ನಿರಾಶೆಗೊಳಿಸಿದರು.
ಆಸ್ಟ್ರೇಲಿಯಾ ಎ ತಂಡ ತನ್ನ ಬೌಲಿಂಗ್ ಯೋಜನೆಯನ್ನು ಸಮರ್ಥವಾಗಿ ನಿರ್ವಹಿಸಿತು. ವೇಗಿ ಗುರೀಂದರ್ ಸಿಂಗ್ ಸಾಂಧು(3/25) ಉತ್ತಮ ಅಂಕಿಅಂಶ ಹೊಂದಿದ್ದರೆ, ಎಡಗೈ ಸ್ಪಿನ್ ಅವಳಿಗಳಾದ ಸ್ಟೀವ್ ಓ ಕೀಫ್ 2 ವಿಕೆಟ್ ಮತ್ತು ಅಶ್ಟಾನ್ ಅಗರ್ 2 ವಿಕೆಟ್ ನೆರವಿನಿಂದ ಭಾರತ ಎ ತಂಡದ ಮೇಲಿನ ಕ್ರಮಾಂಕದ ಬ್ಯಾಟ್ಸ್ಮನ್ಗಳನ್ನು ಔಟ್ ಮಾಡಿದರು.