ಪುಟ್ಟ ಬಾಲಕನ ಆಸೆ ಪೂರೈಸಿದ ವಿರಾಟ್ ಕೊಹ್ಲಿ

ಶನಿವಾರ, 25 ಆಗಸ್ಟ್ 2018 (11:10 IST)
ಲಂಡನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತನಗಾಗಿ ಕಾದು ನಿಂತಿದ್ದ ಪುಟ್ಟ ಬಾಲಕನ ಆಸೆ ಪೂರೈಸಿ ಹೃದಯ ಗೆದ್ದಿದ್ದಾರೆ.

ಪಂದ್ಯ ಮುಗಿಸಿ ಮರಳುವಾಗ ತನಗಾಗಿ ಸಾಲುಗಟ್ಟಿ ನಿಂತಿದ್ದ ಅಭಿಮಾನಿಗಳಿಗೆ ಅಟೋಗ್ರಾಫ್ ನೀಡಿದ ಕೊಹ್ಲಿಗೆ ಜನರ ಮಧ್ಯದಿಂದ ತನ್ನ ಹೆಸರು ಕೂಗಿ ಕರೆದು ಒಂದು ಫೋಟೋ ಪ್ಲೀಸ್ ಎನ್ನುತ್ತಿದ್ದ ಬಾಲಕನ ಆಸೆ ಪೂರೈಸಿದ್ದಾರೆ.

‘ವಿರಾಟ್ ಎ ಪಿಕ್ಚರ್ ಪ್ಲೀಸ್.. ‘ ಎಂದು ಕೂಗಿ ಕರೆಯುತ್ತಿದ್ದ ಬಾಲಕನ ಬಳಿ ತೆರಳಿದ ಕೊಹ್ಲಿ ಆತನಿಂದ ಮೊಬೈಲ್ ಪಡೆದು ಸೆಲ್ಫೀ ಕ್ಲಿಕ್ಕಿಸಿ ಕೊಟ್ಟಿದ್ದಲ್ಲದೆ, “ಈಗ ಸರಿ ಆಯ್ತಲ್ವಾ?’ ಎಂದು ಪ್ರಶ್ನಿಸಿ ಪುಟ್ಟ ಅಭಿಮಾನಿಗೆ ಖುಷಿ ಕೊಟ್ಟಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ