ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಇಂಗ್ಲೆಂಡ್ ಅಭಿಮಾನಿಗಳ ಗೌರವ

ಗುರುವಾರ, 26 ಜುಲೈ 2018 (11:27 IST)
ಲಂಡನ್: ಟೀಂ ಇಂಡಿಯಾಗೆ ಅಧಿಕೃತ ಅಭಿಮಾನಿಗಳ ಗುಂಪು ಭಾರತ್ ಆರ್ಮಿ ಇರುವಂತೇ ಇಂಗ್ಲೆಂಡ್ ತಂಡಕ್ಕೂ ಬಾರ್ಮಿ ಆರ್ಮಿ ಎಂಬ ಅಭಿಮಾನಿಗಳ ಗುಂಪು ಇದೆ.
 

ಈ ಅಭಿಮಾನಿಗಳ ಸಂಘ ಇದೀಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ 2017-18 ನೇ ಸಾಲಿನ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿ ನೀಡಿ ಗೌರವಿಸಿದೆ. ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿರುವ ವಿರಾಟ್ ಕೊಹ್ಲಿಗೆ ಪ್ರಶಸ್ತಿ ಫಲಕ ನೀಡಿ ಗೌರವಿಸಿದೆ.

ಈ ವಿಚಾರವನ್ನು ಸ್ವತಃ ಬಿಸಿಸಿಐ ತನ್ನ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿದೆ. ಅಂತೂ ಟೆಸ್ಟ್ ಸರಣಿಗೆ ಮೊದಲು ಟೀಂ ಇಂಡಿಯಾ ನಾಯಕನಿಗೆ ಇಂಗ್ಲೆಂಡ್ ಅಭಿಮಾನಿಗಳಿಂದ ತಕ್ಕ ಗೌರವವೇ ಸಿಕ್ಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ