ಸೋಲಿನ ನಡುವೇ ಆತಂಕ ತಂದ ವಿರಾಟ್ ಕೊಹ್ಲಿ ದೇಹಸ್ಥಿತಿ!
ಈಗಾಗಲೇ ಮಂಕು ಕವಿದಿರುವ ಟೀಂ ಇಂಡಿಯಾಗೆ ಕೊಹ್ಲಿಯ ಗಾಯದ ಚಿಂತೆ ಮತ್ತಷ್ಟು ಧೃತಿಗೆಡಿಸಲಿದೆ. ವಿಪರೀತ ಕೆಲಸದೊತ್ತಡದಿಂದ ನನಗೆ ಮತ್ತೆ ಬೆನ್ನು ನೋವು ಕಾಣಿಸಿಕೊಳ್ಳುತ್ತಿದೆ. ಮುಂದಿನ ಐದು ದಿನಗಳಲ್ಲಿ ಚೇತರಿಸಿಕೊಳ್ಳಬಹುದು ಎಂಬ ವಿಶ್ವಾಸವನ್ನು ಕೊಹ್ಲಿ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಕೊಹ್ಲಿ ಬೆನ್ನು ನೋವಿನ ಕಾರಣಕ್ಕೆ ಹೊರಗುಳಿಯುವಂತಾದರೆ ಟೀಂ ಇಂಡಿಯಾದ ಗತಿ ಎ ದರ್ಜೆ ತಂಡಕ್ಕಿಂತ ಕಡೆಯಾಗುವುದು ನಿಶ್ವಿತ.