ವಿರಾಟ್ ಕೊಹ್ಲಿ-ಕಗಿಸೋ ರಬಡಾ ಕ್ರೀಸ್ ನಲ್ಲೇ ಜಗಳ

ಸೋಮವಾರ, 15 ಜನವರಿ 2018 (11:23 IST)
ಸೆಂಚೂರಿಯನ್: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತ ಕೊಂಚ ಸುಧಾರಿತ ಪ್ರದರ್ಶನ ತೋರುತ್ತಿರುವಾಗಲೇ ದ.ಆಫ್ರಿಕಾ ಬೌಲರ್ ಗಳು ಸ್ಲೆಡ್ಜಿಂಗ್ ಮಾಡಲು ತೊಡಗಿದ್ದಾರೆ.
 

ನಿನ್ನೆಯ ದಿನ ಕ್ರೀಸ್ ನಲ್ಲಿದ್ದ ವಿರಾಟ್ ಕೊಹ್ಲಿಗೆ ಆಫ್ರಿಕಾ ಬೌಲರ್ ಕಗಿಸೋ ರಬಾಡಾ ಮಾತಿನಲ್ಲೇ ಕೆಣಕಿದ್ದಾರೆ. ಈ ಸಂದರ್ಭದಲ್ಲಿ ವಿರಾಟ್ ಕೂಡಾ ಕಗಿಸೋಗೆ ತಿರುಗೇಟು ನೀಡಿದ್ದಾರೆ.

ಆದರೆ ಈ ಮಾತಿನ ಚಕಮಕಿಯಿಂದ ವಿಚಲಿತರಾಗದ ವಿರಾಟ್ ದಿನದಂತ್ಯದವರೆಗೂ ನಾಟೌಟ್ ಆಗಿ ಉಳಿದು ಭಾರತದ ಹೋರಾಟದ ಮುಂಚೂಣಿ ವಹಿಸಿದ್ದಾರೆ. ಓವರ್ ಅಂತ್ಯದಲ್ಲಿ ಈ ಮಾತಿನ ಚಕಮಕಿ ನಡೆದಿದ್ದು, ಮುಂದೆ ಮತ್ತಷ್ಟು ವಾರ್ ಆಫ್ ವರ್ಡ್ಸ್ ನಿರೀಕ್ಷಿಸಬಹುದಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ