ನಾಲ್ಕನೇ ಸ್ಥಾನಕ್ಕೆ ಜಿಗಿದ ವಿರಾಟ್ ಕೊಹ್ಲಿ , ಭಾರತಕ್ಕೆ 2ನೇ ಸ್ಥಾನ

ಗುರುವಾರ, 27 ಆಗಸ್ಟ್ 2015 (18:27 IST)
ಭಾರತದ ಬ್ಯಾಟಿಂಗ್ ಪ್ರತಿಭೆ ವಿರಾಟ್ ಕೊಹ್ಲಿ ಏಕ ದಿನ ಬ್ಯಾಟ್ಸ್‌ಮನ್‌ಗಳಿಗಿರುವ ಐಸಿಸಿ ಶ್ರೇಯಾಂಕದಲ್ಲಿ ನಾಲ್ಕನೇ ಸ್ಥಾನಕ್ಕೆ ಜಿಗಿದಿದ್ದಾರೆ. ಟೀಂ ಇಂಡಿಯಾ ತಂಡವು ತಂಡದ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಕಾಯ್ದುಕೊಂಡಿದೆ.

ಕೊಹ್ಲಿ ಜತೆಗೆ  ಶಿಖರ್ ಧವನ್ ಮತ್ತು ಏಕದಿನ ನಾಯಕ ದೋನಿ  ಅಗ್ರ 10ರ ಪಟ್ಟಿಯಲ್ಲಿರುವ ಭಾರತೀಯ ಆಟಗಾರರು. ಧವನ್ ತಮ್ಮ ಏಳನೇ ಸ್ಥಾನ ಕಾಯ್ದುಕೊಂಡಿದ್ದರೆ, ಧೋನಿ 9ನೇ ಸ್ಥಾನದಲ್ಲಿ ಸ್ಥಿರವಾಗಿದ್ದಾರೆ. 
 
ಬ್ಯಾಟ್ಸ್‌ಮನ್ ಪಟ್ಟಿಯಲ್ಲಿ ಎಬಿ ಡಿವಿಲಿಯರ್ಸ್ ಅಗ್ರಸ್ಥಾನದಲ್ಲಿದ್ದರೆ, ಏಕ ದಿನ ಬೌಲರುಗಳ ಪಟ್ಟಿಯಲ್ಲಿ ಅಗ್ರ 10ರ ಪಟ್ಟಿಯಲ್ಲಿ ಅಶ್ವಿನ್ ಮಾತ್ರ 10ನೇ ಸ್ಥಾನದಲ್ಲಿದ್ದಾರೆ. 
ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ನಂಬರ್ ಒನ್ ಬೌಲರ್ ಆಗಿದ್ದರೆ, ದಕ್ಷಿಣ ಆಫ್ರಿಕಾದ ಇಮ್ರಾನ್ ತಾಹಿರ್ ಎರಡನೇ ಸ್ಥಾನಕ್ಕೆ ಜಿಗಿದಿದ್ದಾರೆ. ಈ ಮಧ್ಯೆ ದಕ್ಷಿಣ ಆಫ್ರಿಕಾ ನ್ಯೂಜಿಲೆಂಡ್ ವಿರುದ್ಧ 2-1 ಜಯದಿಂದ ಮೂರನೇ ಸ್ಥಾನಕ್ಕೆ ಜಿಗಿದಿದ್ದಾರೆ.

ವೆಬ್ದುನಿಯಾವನ್ನು ಓದಿ