ಎರಡು ದೈತ್ಯ ತಂಡಗಳ ನಡುವೆ ಅಮೆರಿಕದಲ್ಲಿ ಟಿ 20

ಶುಕ್ರವಾರ, 26 ಆಗಸ್ಟ್ 2016 (18:41 IST)
ಕ್ರಿಕೆಟ್ ಕ್ರೀಡೆ ಅಮೆರಿಕಕ್ಕೆ ದೊಡ್ಡ ರೀತಿಯಲ್ಲಿ ಆಗಮಿಸಿದ್ದು ಎರಡು ಟಿ 20 ದೈತ್ಯ ತಂಡಗಳ ನಡುವೆ ಕ್ರಿಕೆಟ್ ಅಮೆರಿಕದ ಜನರ ಮನರಂಜಿಸಲಿದೆ. ಭಾರತ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಎರಡು ಟ್ವೆಂಟಿ 20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಶನಿವಾರ ಮತ್ತು ಭಾನುವಾರ  ಫ್ಲೋರಿಡಾದಲ್ಲಿ ಆಡಲಿದೆ. ನಾಲ್ಕು ಟೆಸ್ಟ್ ಸರಣಿಯನ್ನು 2-0ಯಿಂದ ಗೆದ್ದ ಬಳಿಕ ನಾಲ್ಕು ದಿನಗಳ ಕೆಳಗೆ ಅಮೆರಿಕಕ್ಕೆ ಆಗಮಿಸಿದ ಭಾರತದ ತಂಡ ಇಲ್ಲಿ ಮೋಜಿನಿಂದ ಕಾಲಕಳೆಯಿತು.
 
 ಕೊಹ್ಲಿ ಟಿ 20ಯಲ್ಲಿ ಅದ್ಭುತ ಫಾರಂನಲ್ಲಿದ್ದು, 137 ರನ್ ಸರಾಸರಿಯಲ್ಲಿ 625 ರನ್ ಸಿಡಿಸಿದ್ದಾರೆ. 2016ರ ಐಪಿಎಲ್‌ನಲ್ಲಿ ದಾಖಲೆಯ 973 ರನ್ ಸ್ಕೋರ್ ಮಾಡಿದ್ದಾರೆ. ಭಾರತವನ್ನು ವಿಶ್ವಕಪ್ ಸೆಮಿಫೈನಲ್‌ನಲ್ಲಿ ಸೋಲಿಸಿದ ವಿಂಡೀಸ್ ವಿರುದ್ಧ ಕೊಹ್ಲಿ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದಾರೆ.

ಸತತವಾಗಿ ಮೂರು ಟ್ವೆಂಟಿ 20 ಸರಣಿಗಳನ್ನು ಗೆದ್ದ ಧೋನಿ ಕೋಚ್ ಅನಿಲ್ ಕುಂಬ್ಳೆ ಜತೆ ಆಟದ ಕಾರ್ಯಯೋಜನೆ ಕುರಿತು ಚರ್ಚಿಸಿದರು. ಅಭ್ಯಾಸ ಸೆಷನ್‌ಗೆ ಮುನ್ನ, ಭಾರತದ ಆಟಗಾರರು ಅಮೆರಿಕದಲ್ಲಿ ಆನಂದದಿಂದ ಕಾಲಕಳೆದರು. ಹೊಟೆಲ್‌ವೊಂದರಲ್ಲಿ  ತಂಡಕ್ಕೆ ಡಿನ್ನರ್ ಕೂಡ ವ್ಯವಸ್ಥೆ ಮಾಡಲಾಗಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ