ವಿರಾಟ್ ಕೊಹ್ಲಿ ಜಗತ್ತಿನ 6ನೇ ಅತೀ ಮಾರುಕಟ್ಟೆ ಬೇಡಿಕೆಯ ಆಟಗಾರ

ಶುಕ್ರವಾರ, 22 ಮೇ 2015 (13:34 IST)
ನವದೆಹಲಿ: ಭಾರತ ತಂಡದ ಪಿನ್ ಅಪ್ ಬಾಯ್ ಮತ್ತು ಟೆಸ್ಟ್ ನಾಯಕ ವಿರಾಟ್ ಕೊಹ್ಲಿ  ಅವರನ್ನು ಜಗತ್ತಿನ 6ನೇ ಅತ್ಯಂತ ಮಾರುಕಟ್ಟೆ ಬೇಡಿಕೆಯ ಆಟಗಾರ ಎಂದು ಬೆಲೆಕಟ್ಟಲಾಗಿದೆ. ಕೊಹ್ಲಿ ಪ್ರಸಕ್ತ ರಾಯಲ್ ಚಾಲೆಂಜರ್ಸ್ ನಾಯಕರಾಗಿದ್ದು,  ವಾಣಿಜ್ಯವಾಗಿ ಕಾರ್ಯಸಾಧ್ಯವಾದ 50 ಅಥ್ಲೇಟ್‌ಗಳ ಪಟ್ಟಿಯಲ್ಲಿ ಸ್ಥಾನಪಡೆದಿದ್ದಾರೆ. 
 
ಕೆನಡಾದ ಟೆನ್ನಿಸ್ ಆಟಗಾರ ಯೂಗಿನ್ ಬುಶಾರ್ಡ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಅವರ ಬೆನ್ನಹಿಂದೆ ಬ್ರೆಜಿಲಿನ ಫುಟ್ಬಾಲ್ ಸ್ಟಾರ್ ನೇಮಾರ್ ಮತ್ತು ಮಾಸ್ಟರ್ ಗಾಲ್ಫ್ ಚಾಂಪಿಯನ್ ಜೋರ್ಡಾನ್ ಸ್ಪೀತ್ ಇದ್ದಾರೆ. 
 
21 ವರ್ಷದ ಬುಶಾರ್ಡ್  2014ರ ಸೀಸನ್‌ನಲ್ಲಿ ಮಹಿಳಾ ಟೆನ್ನಿಸ್ ಸಂಸ್ಥೆಯ ಅತ್ಯಂತ ಸುಧಾರಿತ ಆಟಗಾರ್ತಿ ಪ್ರಶಸ್ತಿ ವಿಜೇತರಾಗಿದ್ದು, ಅವರು ಕಳೆದ ವರ್ಷ ಎರಡು ಗ್ರಾಂಡ್ ಸ್ಲಾಮ್ ಸೆಮಿ ಫೈನಲ್ಸ್ ತಲುಪಿದ್ದಾರೆ ಮತ್ತು ವಿಂಬಲ್ಡನ್ ಫೈನಲ್ ಪ್ರವೇಶ ಮಾಡಿದ್ದಾರೆ. 
 
ನೇಮರ್ ಪಟ್ಟಿಯಲ್ಲಿ ಕಳೆದ ಎರಡು ಬಾರಿ ಟಾಪರ್ ಆಗಿದ್ದು, 2012 ಮತ್ತು 2013ರಲ್ಲಿ ಈ ಸ್ಥಾನ ಪಡೆದಿದ್ದರು.  ಜಪಾನಿನ ಟೆನ್ನಿಸ್ ಆಟಗಾರ ಕೈ ನಿಶಿಕೋರಿ 8ನೇ ಸ್ಥಾನದಲ್ಲಿ ಪಟ್ಟಿಯಲ್ಲಿ ಹೊಸ ಪ್ರವೇಶ ಮಾಡಿದ್ದಾರೆ. ಫಾರ್ಮುಲಾ ಒನ್ ರೇಸರ್ ಲೆವಿಸ್ ಹ್ಯಾಮಿಲ್ಟನ್ ಒಂದು ವರ್ಷದ ಹಿಂದೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು ಈ ವರ್ಷದ ಶ್ರೇಯಾಂಕದಲ್ಲಿ 6 ನೇಸ್ಥಾನಕ್ಕೆ ಕುಸಿದಿದ್ದಾರೆ. 
 
ಒಲಿಂಪಿಕ್ ಸ್ಪ್ರಿಂಟ್ ಚಾಂಪಿಯನ್ ಉಸೇನ್ ಬೋಲ್ಟ್ 2011ರಲ್ಲಿ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದು, ಈ ವರ್ಷ 10ನೇ ಸ್ಥಾನಕ್ಕೆ ಕುಸಿದಿದ್ದಾರೆ. 
 ಟಾಪ್ 10 ಮಾರುಕಟ್ಟೆ ಬೇಡಿಕೆಯ ಅಥ್ಲೇಟ್‌ಗಳು 
 
1. ಯುಗೀನ್ ಬೂಶಾರ್ಡ್ (ಟೆನಿಸ್)
2.ನೇಮರ್ (ಫುಟ್ಬಾಲ್)
3. ಜೋರ್ಡಾನ್ ಸ್ಪೀತ್ (ಗಾಲ್ಫ್)
4. ಮಿಸ್ಸಿ ಫ್ರಾಂಕ್ಲಿನ್ (ಈಜು)
5. ಲೂಯಿಸ್ ಹ್ಯಾಮಿಲ್ಟನ್ (ಎಫ್ 1)
6. ವಿರಾಟ್ ಕೊಹ್ಲಿ (ಕ್ರಿಕೆಟ್)
7. ಸ್ಟೀಫನ್ ಕರಿ (ಬ್ಯಾಸ್ಕೆಟ್ಬಾಲ್)
8. ಕೇಯ್ ನಿಷಿಕೊರಿ (ಟೆನಿಸ್)
9. ಕಥರೀನಾ ಜಾನ್ಸನ್-ಥಾಂಪ್ಸನ್ (ಅಥ್ಲೆಟಿಕ್ಸ್)
10. ಉಸೇನ್ ಬೋಲ್ಟ್ (ಅಥ್ಲೆಟಿಕ್ಸ್)

ವೆಬ್ದುನಿಯಾವನ್ನು ಓದಿ