ರೋಹಿತ್ ಶರ್ಮಾಗೆ ಡ್ರೆಸ್ಸಿಂಗ್ ರೂಂ ಬಾಗಿಲು ತೆರೆದು ಸ್ವಾಗತಿಸಿದ ವಿರಾಟ್ ಕೊಹ್ಲಿ

ಶುಕ್ರವಾರ, 4 ಅಕ್ಟೋಬರ್ 2019 (09:13 IST)
ವಿಶಾಖಪಟ್ಟಣ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ನಡುವೆ ವೈಮನಸ್ಯವಿದೆ ಎನ್ನುವವರಿಗೆ ನಾಯಕ ಕೊಹ್ಲಿ ನಿನ್ನೆ ಉತ್ತರ ಕೊಟ್ಟಿದ್ದಾರೆ.


ಶತಕ ಗಳಿಸಿದ್ದ ರೋಹಿತ್ ಔಟಾಗಿ ಡ್ರೆಸ್ಸಿಂಗ್ ರೂಂಗೆ ಮರಳುವಾಗ ಕೊಹ್ಲಿ ಸ್ವತಃ ತಾವೇ ಬಾಗಿಲು ತೆರೆದು ನಿಂತಿದ್ದಲ್ಲದೆ, ಬೆನ್ನು ತಟ್ಟಿ ಅಭಿನಂದಿಸಿ ಒಳಗೆ ಕರೆಸಿಕೊಂಡಿದ್ದಾರೆ. ಕೊಹ್ಲಿಯ ಈ ನಡೆ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

ವೈಮನಸ್ಯಗಳೇನೇ ಇದ್ದರೂ ಆಟದ ವಿಚಾರದಲ್ಲಿ ತಾನು ಯಾವತ್ತೂ ರೋಹಿತ್ ರನ್ನು ಬೆಂಬಲಿಸುವುದಾಗಿ ಕೊಹ್ಲಿ ಈ ಮೂಲಕ ಸೂಚಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ