ಕೌಟುಂಬಿಕ ಕಾರಣಕ್ಕೆ ದಿಡೀರ್ ಆಫ್ರಿಕಾದಿಂದ ತವರಿಗೆ ಮರಳಿದ ವಿರಾಟ್ ಕೊಹ್ಲಿ
ಭಾರತ ಮತ್ತು ಆಫ್ರಿಕಾ ನಡುವಿನ ಟೆಸ್ಟ್ ಸರಣಿ ಆರಂಭವಾಗುವುದಕ್ಕೆ ಇನ್ನು ನಾಲ್ಕು ದಿನಗಳು ಬಾಕಿಯಿರುವಾಗ ಟೀಂ ಇಂಡಿಯಾಗೆ ಈ ಶಾಕ್ ಸಿಕ್ಕಿದೆ. ಅಷ್ಟಕ್ಕೂ ಕೊಹ್ಲಿ ಮೊದಲ ಟೆಸ್ಟ್ ಪಂದ್ಯಕ್ಕೆ ವಾಪಸ್ ಆಗಲಿದ್ದಾರೆ ಎನ್ನುವುದು ಇನ್ನೂ ಖಚಿತವಾಗಿಲ್ಲ.
ಕೊಹ್ಲಿ ಜೊತೆಗೆ ಟೀಂ ಇಂಡಿಯಾಕ್ಕೆ ಇನ್ನೊಂದು ಶಾಕ್ ಸಿಕ್ಕಿದೆ. ಆರಂಭಿಕ ಋತುರಾಜ್ ಗಾಯಕ್ ವಾಡ್ ಕೂಡಾ ಗಾಯದ ಕಾರಣಕ್ಕೆ ಆಫ್ರಿಕಾ ಸರಣಿಯಿಂದ ಹೊರಹೋಗಿದ್ದಾರೆ.
ಅನುಷ್ಕಾ ಶರ್ಮಾ ಎರಡನೇ ಬಾರಿಗೆ ಗರ್ಭಿಣಿ ಎನ್ನುವ ವರದಿಗಳ ಬೆನ್ನಲ್ಲೇ ಕೊಹ್ಲಿ ಇದು ಎರಡನ ೇಬಾರಿಗೆ ಟೀಂ ಇಂಡಿಯಾ ಕರ್ತವ್ಯದಲ್ಲಿರುವಾಗಲೇ ತವರಿಗೆ ಮರಳುತ್ತಿದ್ದಾರೆ. ಇದಕ್ಕೆ ಮೊದಲು ವಿಶ್ವಕಪ್ ಆರಂಭಕ್ಕೂ ಮುನ್ನ ಕೌಟುಂಬಿಕ ಕಾರಣ ನೀಡಿ ತವರಿಗೆ ಮರಳಿದ್ದರು.