ಮಾರ್ನೆ ಮಾರ್ಕೆಲ್ ಮಾರಕ ಬೌಲಿಂಗ್ ದಾಳಿಗೆ ನೆಲಕಚ್ಚಿದ ಭಾರತ

ಸೋಮವಾರ, 19 ಅಕ್ಟೋಬರ್ 2015 (11:19 IST)
ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಅವರ ಅಬ್ಬರದ ಶತಕ ಮತ್ತು ವೇಗದ ಬೌಲರ್  ಮಾರ್ನೆ ಮಾರ್ಕೆಲ್ ನಾಲ್ಕು ವಿಕೆಟ್‌ ಕಬಳಿಸುವ ಮೂಲಕ ಅಂತಿಮ ಸ್ಪರ್ಶ ನೀಡಿ ದಕ್ಷಿಣ ಆಫ್ರಿಕಾ ಭಾರತವನ್ನು 18 ರನ್‌ಗಳಿಂದ ಸೋಲಿಸಿ ಸರಣಿಯಲ್ಲಿ 2-1ರಿಂದ ಮುನ್ನಡೆ ಸಾಧಿಸಿದೆ. 22 ವರ್ಷದ ಡಿ ಕಾಕ್ ಅವರ ಅಬ್ಬರದ ಆಟದ ನೆರವಿನಿಂದ ದಕ್ಷಿಣ ಆಫ್ರಿಕಾ 7 ವಿಕೆಟ್ ಕಳೆದುಕೊಂಡು 270 ರನ್ ಗಳಿಸಿತು.

ಡಿ ಕಾಕ್ 11 ಬೌಂಡರಿ ಮತ್ತು ಒಂದು ಸಿಕ್ಸರ್‌‌ನಿಂದ ಕೂಡಿದ 103 ರನ್ ಗಳಿಸಿದರು. ಇದಕ್ಕೆ ಉತ್ತರವಾಗಿ ಭಾರತ ಆರಂಭದಲ್ಲೇ ಶಿಖರ್ ಧವನ್ ವಿಕೆಟ್ ಕಳೆದುಕೊಂಡರೂ ರೋಹಿತ್ ಶರ್ಮಾ(65) ಮತ್ತು ವಿರಾಟ್ ಕೊಹ್ಲಿ(77) ಅವರ ಅರ್ಧ ಶತಕಗಳ ನೆರವಿನಿಂದ ಸುಲಭ ಜಯದತ್ತ ದಾಪುಗಾಲು ಹಾಕಿತ್ತು. ರೋಹಿತ್ ಮತ್ತು ಕೊಹ್ಲಿ ಎರಡನೇ ವಿಕೆಟ್‌‍ಗೆ 72 ರನ್ ಕಲೆಹಾಕಿದರು. ಆದರೆ ಅರೆಕಾಲಿಕ ಆಫ್‌ಸ್ಪಿನ್ನರ್ ಜೆಪಿ ಡುಮಿನಿ ಎಸೆತಕ್ಕೆ ರಿಟರ್ನ್ ಕ್ಯಾಚ್ ನೀಡಿದ ರೋಹಿತ್ ಔಟಾದರು.  

ಕೊಹ್ಲಿ ಬಳಿಕ ಧೋನಿ ಜತೆ 80 ರನ್ ಜತೆಯಾಟವಾಡಿದರು. ಮಾರ್ಕೆಟ್ ಶಾರ್ಟ್ ಬಾಲ್‌ಗೆ ಧೋನಿ ಔಟಾದ ಬಳಿಕ ಕೊಹ್ಲಿ ಮತ್ತು ಅಜಿಂಕ್ಯಾ ರಹಾನೆ ರನ್ ವೇಗ ಹೆಚ್ಚಿಸಿದಾಗ ಭಾರತದ ಪಾಳೆಯದಲ್ಲಿ ಗೆಲುವಿನ ಆಸೆ ಚಿಗುರಿತ್ತು.  ಆದರೆ ಅಂತಿಮ ಓವರುಗಳಲ್ಲಿ ಅನಿರೀಕ್ಷಿತ ತಿರುವು ತೆಗೆದುಕೊಂಡು ರೈನ ತಾಹಿರ್ ಬೌಲಿಂಗ್‌ನಲ್ಲಿ ಮತ್ತು  ಕೊಹ್ಲಿ, ರಹಾನೆ ಮಾರ್ಕೆಲ್ ಎಸೆತಕ್ಕೆ  ಔಟಾದ ಬಳಿಕ ಭಾರತ 6ವಿಕೆಟ್‌ಗೆ 252 ರನ್ ಗಳಿಸಲು ಮಾತ್ರ ಸಾಧ್ಯವಾಗಿ ಸೋಲಪ್ಪಿತು.
 
 ಸಂಕ್ಷಿಪ್ತ ಸ್ಕೋರು: 
ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್ 103, ಪ್ಲೆಸಿಸ್ 60 ರನ್,  ಬೆಹರಡಿನ್ 33  ಒಟ್ಟು ಸ್ಕೋರ್:  7 ವಿಕೆಟ್‌ಗೆ 270, ಮೋಹಿತ್ ಶರ್ಮಾ 2 ವಿಕೆಟ್
ಭಾರತ:  ರೋಹಿತ್ ಶರ್ಮಾ 65, ವಿರಾಟ್ ಕೊಹ್ಲಿ 77, ಧೋನಿ 47 ಒಟ್ಟು 6ವಿಕೆಟ್‌ಗೆ 252 ರನ್. 18 ರನ್‌ಗಳ ಅಂತರದಿಂದ ಸೋಲು. ಮಾರ್ಕೆಲ್ 4 ವಿಕೆಟ್ 
 

ವೆಬ್ದುನಿಯಾವನ್ನು ಓದಿ