ಪತ್ನಿ ಅನುಷ್ಕಾ ಜತೆ ಸ್ಪರ್ಧೆಗಿಳಿಯಲ್ಲ ಎಂದ ವಿರಾಟ್ ಕೊಹ್ಲಿ
‘ನಾವಿಬ್ಬರೂ ನಮ್ಮ ವೃತ್ತಿಯಲ್ಲಿ ಬ್ಯುಸಿ. ಅನುಷ್ಕಾ ಒಬ್ಬ ವೃತ್ತಿಪರ ನಟಿ. ಆಕೆಯ ವೃತ್ತಿಯಲ್ಲಿ ಸಾಕಷ್ಟು ಅನುಭವ ಗಳಿಸಿದ್ದಾಳೆ. ಆದರೆ ನಾವಿಬ್ಬರೂ ವೃತ್ತಿ ವಿಚಾರದಲ್ಲಿ ಸ್ಪರ್ಧೆಗಿಳಿಯಲ್ಲ’ ಎಂದು ವಿರಾಟ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
‘ಜನರು ನಮಗೆ ಇಂತಹ ಪ್ರಶ್ನೆ ಕೇಳುವಾಗ ಅಚ್ಚರಿಯಾಗುತ್ತದೆ. ನಮಗೆ ಇಂತಹ ಆಲೋಚನೆ ಕೂಡಾ ಬರಲ್ಲ. ವೃತ್ತಿಗೆ ಸಂಬಂಧಿಸಿ ಹೇಳುವುದಾದರೆ ಆಕೆಗೆ ಏನು ಮಾಡಬೇಕು, ಮಾಡಬಾರದು ಎಂದು ಚೆನ್ನಾಗಿ ಗೊತ್ತಿದೆ. ಹೀಗಾಗಿ ಒಬ್ಬರ ವೃತ್ತಿಯಲ್ಲಿ ಮತ್ತೊಬ್ಬರು ಮೂಗು ತೂರಿಸುವ ಅಗತ್ಯವಿಲ್ಲ’ ಎಂದು ವಿರಾಟ್ ಹೇಳಿಕೊಂಡಿದ್ದಾರೆ.