ಆಸ್ಟ್ರೇಲಿಯಾ ಟೆಸ್ಟ್ ಗೆ ಮೊದಲು ಟೀಂ ಇಂಡಿಯಾ ಕ್ರಿಕೆಟಿಗರಿಗೆ ಪ್ರಿಪರೇಟರಿ ಪರೀಕ್ಷೆ!

ಭಾನುವಾರ, 11 ನವೆಂಬರ್ 2018 (09:39 IST)
ಮುಂಬೈ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದು ಚೆನ್ನೈನಲ್ಲಿ ಅಂತಿಮ ಟಿ20 ಪಂದ್ಯದಲ್ಲಿ ನಡೆಯಲಿದ್ದು, ಮಹತ್ವದ ಆಸ್ಟ್ರೇಲಿಯಾ ಟೆಸ್ಟ್ ಸರಣಿಗೆ ಮೊದಲು ಟೀಂ ಇಂಡಿಯಾ ಕ್ರಿಕೆಟಿಗರಿಗೆ ಅಭ್ಯಾಸ ನಡೆಸಲು ವೇದಿಕೆಯಂತಾಗಿದೆ.

ಈಗಾಗಲೇ ಟೀಂ ಇಂಡಿಯಾ ಸರಣಿ ಗೆದ್ದಿರುವುದರಿಂದ ಈ ಪಂದ್ಯದ ಫಲಿತಾಂಶ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಹೀಗಾಗಿ ಆಸ್ಟ್ರೇಲಿಯಾ ಸರಣಿಗೆ ಮೊದಲು ತಮ್ಮ ಬೆಂಚ್ ಸ್ಟ್ರೆಂಗ್ತ್ ಪರೀಕ್ಷಿಸಲು ಟೀಂ ಇಂಡಿಯಾಕ್ಕೆ ಸಿಕ್ಕಿದ ಅವಕಾಶವಾಗಲಿದೆ.

ಹೀಗಾಗಿ ಇಂದಿನ ಪಂದ್ಯದಲ್ಲಿ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿ ಯುವ ಆಟಗಾರರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಸಾಧ್ಯತೆಯಿದೆ. ಪ್ರಮುಖ ಬೌಲರ್ ಗಳಾದ ಉಮೇಶ್ ಯಾದವ್, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್ ಗೆ ರೆಸ್ಟ್ ನೀಡಲಾಗಿದೆ. ಇವರ ಅನುಪಸ್ಥಿತಿಯಲ್ಲಿ ಶ್ರಾದ್ಧೂಲ್ ಠಾಕೂರ್ ಗೆ ಅವಕಾಶ ನೀಡಲಾಗಿದ್ದು, ತಮ್ಮ ಸಾಮರ್ಥ್ಯ ಸಾಬೀತು ಪಡಿಲು ಯುವ ವೇಗಿಗೆ ಅವಕಾಶ ಸಿಕ್ಕಂತಾಗಿದೆ. ಉಳಿದಂತೆ ಕೆಎಲ್ ರಾಹುಲ್, ಶಿಖರ್ ಧವನ್ ಗೆ ತಮ್ಮ ಫಾರ್ಮ್ ಕಂಡುಕೊಳ್ಳಲು ಇದು ಕೊನೆಯ ಅವಕಾಶವಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ