ಸೋತ ಬಳಿಕ ಸೆಂಚುರಿ ಬಗ್ಗೆ ಮಾತಾಡಲ್ಲ ಎಂದ ವಿರಾಟ್ ಕೊಹ್ಲಿ
ಹ್ಯಾಟ್ರಿಕ್ ಶತಕ ಗಳಿಸಿ ದಾಖಲೆ ನಿರ್ಮಿಸಿದ ಕೊಹ್ಲಿಗೆ ತಂಡವನ್ನು ಗೆಲುವಿನ ದಡ ಮುಟ್ಟಿಸಲಾಗದ ಬೇಸರವಿತ್ತು. ಅದೇ ಕಾರಣಕ್ಕೆ ಪಂದ್ಯದ ನಂತರ ಸಂದರ್ಶಕರು ಈ ಬಗ್ಗೆ ಪ್ರಶ್ನೆ ಕೇಳಿದಾಗ ಇದರ ಬಗ್ಗೆ ಮಾತಾಡಲ್ಲ ಎಂದಿದ್ದಾರೆ.
‘ಪದೇ ಪದೇ ವೈಯಕ್ತಿಕ ಸಾಧನೆ ಬಗ್ಗೆ ಕೇಳಿದಾಗ ಮಾತನಾಡಲು ಸಂಕೋಚವೆನಿಸುತ್ತದೆ. ನನ್ನ ಬ್ಯಾಟಿಂಗ್ ಬಗ್ಗೆ ನಾನು ಈಗ ಮಾತಾಡಲ್ಲ. ಸ್ಯಾಮುವೆಲ್ಸ್ ಬೌಲಿಂಗ್ ನ್ನು ಪುಡಿಗಟ್ಟುವುದು ನನ್ನ ಯೋಜನೆಯಾಗಿತ್ತು. ಆದರೆ ಅದು ಸಂಪೂರ್ಣ ಫಲಗೊಡಲಿಲ್ಲ. ನಾವು ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು’ ಎಂದಷ್ಟೇ ಕೊಹ್ಲಿ ಹೇಳಿ ತಮ್ಮ ಮಾತಿಗೆ ವಿರಾಮ ಹಾಕಿದ್ದಾರೆ.