ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮೈದಾನದಲ್ಲಿ ಅಬ್ಬರಿಸುವುದಷ್ಟೇ ಅಲ್ಲ. ಜಾಹೀರಾತು ಗಳಿಕೆಯಲ್ಲೂ ಮುಂದಿದ್ಧಾರೆ.
ಪ್ರತಿಷ್ಠಿತ ಟೈರ್ ಬ್ರಾಂಡ್ ಸಂಸ್ಥೆ ಎಂಆರ್`ಎಫ್ ಜೊತೆ ತಮ್ಮ ಬ್ಯಾಟ್ ಜಾಹೀರಾತು ಒಪ್ಪಂದವನ್ನ ನವೀಕರಿಸಿಕೊಂಡಿರುವ ವಿರಾಟ್ ಕೊಹ್ಲಿ, 8 ವರ್ಷದ ಜಾಹೀರಾತಿಗೆ ಬರೋಬ್ಬರಿ 100 ಕೋಟಿ ರೂ. ಡೀಲ್`ಗೆ ಸಹಿ ಹಾಕಿದ್ದಾರೆ ಎನ್ನುತ್ತಿವೆ ವರದಿಗಳು.
ಕೆಲ ತಿಂಗಳ ಹಿಂದಷ್ಟೇ ವಿರಾಟ್ ಕೊಹ್ಲಿ, ಸ್ಫೋರ್ಟ್ಸ್ ಲೈಫ್ ಸ್ಟೈಲ್ ಬ್ರಾಂಡ್ ಪುಮಾ ಸಂಸ್ಥೆ ಜೊತೆ 110 ಕೋಟಿ ರೂ. ಡೀಲ್`ಗೆ ಸಹಿ ಹಾಕಿದ್ದರು. ಆದರೆ, ವಿರಾಟ್ ಕೊಹ್ಲಿ ಜಾಹೀರಾತು ಒಪ್ಪಂದಗಳನ್ನ ನೋಡಿಕೊಳ್ಳುವ ಕಾರ್ನರ್ ಸ್ಟೋನ್ ಸ್ಫೋರ್ಟ್ಸ್ ಅಂಡ್ ಎಂಟರ್ ಟೈನ್`ಮೆಂಟ್ ಕಂಪನಿ ಬಗ್ಗೆ ಅಧಿಕೃತವಾಗಿ ಏನನ್ನೂ ಹೇಳಿಲ್ಲ.