ವಿರಾಟ್ ಕೊಹ್ಲಿ ಬಗ್ಗೆ ಬಂದ ಈ ಸುದ್ದಿ ನಿಜವೇ?!
ಇಂಗ್ಲೆಂಡ್ ಸರಣಿಗೆ ತಯಾರಾಗಲು ಕೌಂಟಿ ಕ್ರಿಕೆಟ್ ನಲ್ಲಿ ಒಂದು ತಿಂಗಳ ಒಪ್ಪಂದ ಮಾಡಿಕೊಂಡಿರುವ ಕೊಹ್ಲಿಗೆ ಕೌಂಟಿಯೋ, ಟೀಂ ಇಂಡಿಯಾ ಪರ ಟಿ20 ಆಡಬೇಕೋ ಎಂಬ ಗೊಂದಲ ಮೂಡಿತ್ತು.
ಇದೀಗ ಕೊಹ್ಲಿ ಪ್ರತಿನಿಧಿಸುತ್ತಿರುವ ಸರ್ರೆ ತಂಡ ಕೌಂಟಿ ಕ್ರಿಕೆಟ್ ನಲ್ಲೇ ಕೊಹ್ಲಿ ಮುಂದುವರಿಯಲಿದ್ದಾರೆ ಎಂದು ಖಾಸಗಿ ವಾಹಿನಿಯೊಂದಕ್ಕೆ ಹೇಳಿದೆ. ಟೀಂ ಇಂಡಿಯಾ ಐರ್ಲೆಂಡ್ ವಿರುದ್ಧದ ಟಿ20 ಪಂದ್ಯ ಮತ್ತು ಕೌಂಟಿ ಪಂದ್ಯ ಒಂದೇ ದಿನ ನಡೆಯಲಿದ್ದು, ಈ ಸಂದರ್ಭದಲ್ಲಿ ಮೊದಲ ಟಿ20 ಪಂದ್ಯ ತಪ್ಪಿಸಿಕೊಂಡು ಕೊಹ್ಲಿ ಕೌಂಟಿಗೆ ಪ್ರಾಶಸ್ತ್ಯ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.