INDW vs SAW: ದಕ್ಷಿಣ ಆಫ್ರಿಕಾ ಎದುರು ಕೊನೆಯ ಹಂತದಲ್ಲಿ ಭಾರತ ಮಹಿಳೆಯರು ಸೋತಿದ್ದಕ್ಕೆ ಕಾರಣ ಇದುವೇ

Krishnaveni K

ಶುಕ್ರವಾರ, 10 ಅಕ್ಟೋಬರ್ 2025 (09:14 IST)
Photo Credit: X
ವಿಶಾಖಪಟ್ಟಣಂ: ಮಹಿಳೆಯರ ಏಕದಿನ ವಿಶ್ವಕಪ್ ಪಂದ್ಯಾವಳಿಯ ನಿನ್ನೆಯ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತದ ಮಹಿಳೆಯರು ಕೂದಲೆಳೆಯಲ್ಲಿ ಸೋಲು ಕಂಡಿದ್ದಾರೆ. ಕೊನೆಯ ಕ್ಷಣದಲ್ಲಿ ಭಾರತ ಸೋತಿದ್ದು ಯಾಕೆ ಇಲ್ಲಿದೆ ನೋಡಿ ಕಾರಣ.

ಮೊದಲು ಬ್ಯಾಟಿಂಗ್ ಮಾಡಿದ ಭಾರತೀಯರ ಬ್ಯಾಟಿಂಗ್ ಏನೂ ಉತ್ತಮವಾಗಿರಲಿಲ್ಲ. ಒಂದು ಹಂತದಲ್ಲಿ 102 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದ ಭಾರತಕ್ಕೆ ರಿಚಾ ಘೋಷ್ ಭರ್ಜರಿ 94 ರನ್ ಗಳ ಇನಿಂಗ್ಸ್ ಆಡಿ 251 ರನ್ ಗಳ ಗೌರವಯುತ ಮೊತ್ತ ಪೇರಿಸಲು ನೆರವಾದರು.

ಈ ಮೊತ್ತ ಬೆನ್ನತ್ತಿದ ಆಫ್ರಿಕಾ ಒಂದು ಹಂತದದಲ್ಲಿ 142 6 ವಿಕೆಟ್ ಕಳೆದುಕೊಂಡು ಸೋಲುವ ಭೀತಿಯಲ್ಲಿತ್ತು. ಆದರೆ ಕೊನೆಯಲ್ಲಿ ನಾಡಿನ್ ಕ್ಲರ್ಕ್ ಕೇವಲ 54 ಎಸೆತಗಳಿಂದ 84 ಟ್ರಯೋನ್ 49 ರನ್ ಗಳ ಇನಿಂಗ್ಸ್ ಆಡಿ ತಂಡಕ್ಕೆ ನಂಬಲಸಾಧ್ಯ ಗೆಲುವು ಕೊಡಿಸಿದರು. ಇದರೊಂದಿಗೆ ಆಫ್ರಿಕಾ 48.5 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 252 ರನ್ ಗಳಿಸುವ ಮೂಲಕ 3 ವಿಕೆಟ್ ಗಳ ರೋಚಕ ಗೆಲುವು ಸಾಧಿಸಿತು.

40 ಓವರ್ ವರೆಗೂ ರನ್ ಮತ್ತು ಬಾಲ್ ನಡುವೆ ಸಾಕಷ್ಟು ಅಂತರವಿತ್ತು. ಇನ್ನೊಂದೆಡೆ ಪ್ರಮುಖ ವಿಕೆಟ್ ಗಳೂ ಉರುಳಿದ್ದವು. ಹೀಗಾಗಿ ಆಫ್ರಿಕಾ ಸೋಲಬಹುದು ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಭಾರತಕ್ಕೆ ಮುಳುವಾಗಿದ್ದು ಬೌಲರ್ ಗಳ ಕೊರತೆ. ಪ್ರಮುಖ ಬೌಲರ್ ಗಳಿಗೆ ಸಾಕಷ್ಟು ಓವರ್ ಗಳಿರಲಿಲ್ಲ. ಪ್ರಮುಖ ಬೌಲರ್ ಗಳ ಓವರ್ ಖಾಲಿಯಾಗಿದ್ದರಿಂದ ಅರೆಕಾಲಿಕ ಬೌಲರ್ ಗಳನ್ನು ನೆಚ್ಚಿಕೊಳ್ಳಬೇಕಾಯಿತು. ಇದನ್ನು ಆಫ್ರಿಕಾ ಸರಿಯಾಗಿ ಸದ್ಬಳಕೆ ಮಾಡಿತು. ಬೌಲರ್ ಗಳನ್ನು ಸರಿಯಾಗಿ ನಿಭಾಯಿಸದೇ ಇದ್ದಿದ್ದೇ ಭಾರತಕ್ಕೆ ಮುಳುವಾಯಿತು ಎನ್ನಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ