ವಿರಾಟ್ ಕೊಹ್ಲಿ ಟಾಯ್ಲೆಟ್ ಕಾಮೆಂಟ್, ಭಾರತೀಯರ ಹುಸಿ ಭರವಸೆಗಳೂ..

ಸೋಮವಾರ, 6 ಮಾರ್ಚ್ 2017 (09:27 IST)
ಬೆಂಗಳೂರು: ದ್ವಿತೀಯ ಟೆಸ್ಟ್ ನಲ್ಲಿ ಸುಧಾರಿತ ಪ್ರದರ್ಶನ ನೀಡುತ್ತೇವೆಂಬ ವಿರಾಟ್ ಕೊಹ್ಲಿ ಭರವಸೆ ಸುಳ್ಳಾಗಿದೆ. ಹಾಗಾಗಿ ಚೆಂಡು, ಬ್ಯಾಟಿನಿಂದ ಆಗದ ಕೆಲಸವನ್ನು ಕೊಹ್ಲಿ ಪಡೆ ಮಾತಿನಿಂದ ಮಾಡುವ ಪ್ರಯತ್ನ ನಡೆಸುತ್ತಿದೆ.


ದ್ವಿತೀಯ ದಿನ ಬ್ಯಾಟಿಂಗ್ ಮಾಡುತ್ತಿದ್ದ ಆಸೀಸ್ ಆರಂಭಿಕ ರೆನ್ ಶೋ ಬಳಿ ಕೊಹ್ಲಿ ಮಾತಿನ ಚಕಮಕಿ ನಡೆಸಿದ್ದರು. ಮೊದಲ ಟೆಸ್ಟ್ ಪಂದ್ಯದಲ್ಲಿ ಮಾಡಿದಂತೆ ಈ ಪಂದ್ಯದಲ್ಲೂ ಟಾಯ್ಲೆಟ್ ಗೆ ಹೋಗಿ ರೆಸ್ಟ್ ತಗೋ. ಯಾಕೆ ಸುಮ್ಮನೇ ಬ್ಯಾಟಿಂಗ್ ಮಾಡುತ್ತಿದ್ದೀಯಾ ಎಂದು ಕೆಣಕಿದ್ದರು. ಆದರೆ ರೆನ್ ಶೋ ಮೇಲೆ ಇದು ಯಾವುದೇ ರೀತಿಯಲ್ಲೂ ಪರಿಣಾಮ ಬೀರಲಿಲ್ಲ. ಅವರು ಇಂತಹದ್ದನ್ನೆಲ್ಲಾ ಎಷ್ಟೋ ನೋಡಿದ್ದೀನಿ ಎನ್ನುವ ರೀತಿ ಬ್ಯಾಟಿಂಗ್ ಮಾಡಿದರು.

ಇನ್ನು ಚೇತೇಶ್ವರ ಪೂಜಾರ, ಮೊದಲ ಇನಿಂಗ್ಸ್ ನಲ್ಲಿ ಹೇಗೋ ವಿಫಲರಾದೆವು. ದ್ವಿತೀಯ ಇನಿಂಗ್ಸ್ ನಲ್ಲಿ ಕಮ್ ಬ್ಯಾಕ್ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಆದರೆ ಹೇಳಿದಷ್ಟು ಸುಲಭವಲ್ಲ ಮಾಡಿ ತೋರಿಸುವುದು ಎಂದು ಅಭಿಮಾನಿಗಳಿಗೂ ಗೊತ್ತು.

ಇದಕ್ಕೆಲ್ಲಾ ವಿರಾಟ್ ಕೊಹ್ಲಿಯ ನೆಗೆಟಿವ್ ಚಿಂತನೆಗಳೇ ಕಾರಣ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮಾರ್ಕ್ ವಾ ಯದ್ವಾ ತದ್ವಾ ಟೀಕಿಸಿದ್ದಾರೆ. ಕೊಹ್ಲಿ ಮೊದಲ ಇನಿಂಗ್ಸ್ ನಲ್ಲಿ ಔಟಾದ ಬಾಲ್ ನ್ನು ಭಾರತೀಯರು ಕನಸಿನಲ್ಲೂ ಆಡಲು ಸಮರ್ಥರು. ಹಾಗಿದ್ದಾಗಿಯೂ ಕೊಹ್ಲಿ ಆ ರೀತಿ ಔಟಾಗಿ ತಮ್ಮ ತಂಡದವರಿಗೂ ನೆಗೆಟಿವ್ ಸಂದೇಶ ರವಾನಿಸಿದರು ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ