ವಿರಾಟ್ ಕೊಹ್ಲಿ ಶತಕದ ಹೊರತಾಗಿಯೂ ನಿರೀಕ್ಷಿತ ಮೊತ್ತ ಗಳಿಸದ ಟೀಂ ಇಂಡಿಯಾ
ಮಂಗಳವಾರ, 5 ಮಾರ್ಚ್ 2019 (17:08 IST)
ನಾಗ್ಪುರ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಶತಕದ ಹೊರತಾಗಿಯೂ ಟೀಂ ಇಂಡಿಯಾ ಕೇವಲ 250 ರನ್ ಗಳಿಗೆ ಆಲೌಟ್ ಆಗಿದೆ.
ಕೊಹ್ಲಿ 120 ಎಸೆತಗಳಲ್ಲಿ 116 ರನ್ ಗಳಿಸಿ ಔಟಾದರು. ಅವರ ಹೊರತಾಗಿ ವಿಜಯ್ ಶಂಕರ್ 46 ರನ್ ಗಳಿಸಿದ್ದು, ಬಿಟ್ಟರೆ ಉಳಿದ ಬ್ಯಾಟ್ಸ್ ಮನ್ ಗಳಿಂದ ಹೇಳಿಕೊಳ್ಳುವಂತಹ ರನ್ ಬರಲಿಲ್ಲ. ಹೀಗಾಗಿ ಭಾರತ 48.2 ಓವರ್ ಗಳಲ್ಲಿ 250 ರನ್ ಗಳಿಗೆ ಆಲೌಟ್ ಆಯಿತು.
ಆಸ್ಟ್ರೇಲಿಯಾ ಪರ ಪ್ಯಾಟ್ ಕ್ಯುಮಿನ್ಸ್ 4 ವಿಕೆಟ್, ಆಡಂ ಝಂಪಾ 2 ವಿಕೆಟ್ ಕಬಳಿಸಿದರು. ಅದರಲ್ಲೂ ಧೋನಿ, ರೋಹಿತ್ ಶರ್ಮಾ ಶೂನ್ಯಕ್ಕೆ ಔಟಾಗಿದ್ದು, ಭಾರತಕ್ಕೆ ಭಾರೀ ಹೊಡೆತ ನೀಡಿತು. ಇನ್ನು, ಕೊಹ್ಲಿ ವೈಯಕ್ತಿಕವಾಗಿ ನಾಯಕನಾಗಿ ಏಕದಿನ ಪಂದ್ಯಗಳಲ್ಲಿ ಅತೀ ವೇಗದ 9000 ರನ್ ಪೂರೈಸಿದ ದಾಖಲೆ ಮಾಡಿದರು. ಇದು ಅವರ 40 ಏಕದಿನ ಶತಕವಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.