ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭಿಮಾನಿಗಳನ್ನು ವಿಶಿಷ್ಟವಾಗಿ ರಂಜಿಸಿದ ವಿರಾಟ್ ಕೊಹ್ಲಿ!

ಭಾನುವಾರ, 5 ಮಾರ್ಚ್ 2017 (11:42 IST)
ಬೆಂಗಳೂರು: ಭಾರತ ಕಳಪೆ ಮೊತ್ತಕ್ಕೆ ಆಲೌಟ್ ಆಗಿದೆ. ಆಸ್ಟ್ರೇಲಿಯಾ ಊಟದ ವಿರಾಮಕ್ಕೆ ಕೇವಲ 2 ವಿಕೆಟ್ ಕಳೆದುಕೊಂಡು 87 ರನ್ ಗಳಿಸಿದೆ. ಇಂತಹ ಪರಿಸ್ಥಿತಿಯಲ್ಲಿ ನೆರೆದಿರುವ ಭಾರತೀಯ ಅಭಿಮಾನಿಗಳನ್ನು ಖುಷಿಪಡಿಸುವುದು ಹೇಗೆ?


ವಿರಾಟ್ ಕೊಹ್ಲಿಗೆ ಒಂದು ಉಪಾಯ ಸಿಕ್ಕಿದೆ. ಪಂದ್ಯದ ಸ್ಥಿತಿ ಏನೇ ಇರಲಿ, ಮೈದಾನದಲ್ಲಿ ನಗು ನಗುತ್ತಾ ಇರುವುದು. ಜತೆಗೆ ಅಭಿಮಾನಿಗಳಿಗೂ ಸ್ಪಂದಿಸುತ್ತಾ, ಇನ್ನೂ ಜೋರಾಗಿ ಬೊಬ್ಬೆ ಹಾಕಿ ಎಂದು ಹುರಿದುಂಬಿಸುವುದು. ಹೀಗಾದರೂ, ನೀರಸವಾಗಿರುವ ತಮ್ಮ ಆಟಗಾರರನ್ನು ಬಡಿದೆಬ್ಬಿಸುವ ಪ್ರಯತ್ನ ಕೊಹ್ಲಿಯದ್ದು. ಕೊಹ್ಲಿ ಜತೆಗೆ ಇಶಾಂತ್ ಶರ್ಮಾ ಕೂಡಾ ಮುಖದಲ್ಲಿ ಏನೇನೋ ಹಾವಭಾವ ಮಾಡಿ ನೋಡುಗರಿಗೆ ರಂಜನೆ ಒದಗಿಸಿದರು.

ಆದರೂ ಯಾಕೋ ಆಸ್ಟ್ರೇಲಿಯಾದ ಆಟದ ಎದುರು ಭಾರತೀಯರು ಮೇಲೇಳುವ ಪ್ರಯತ್ನ ಕಂಡುಬರಲಿಲ್ಲ.ಕಳೆದ ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದ ರೆನ್ ಶೋ ಈ ಪಂದ್ಯದಲ್ಲೂ 40 ರನ್ ಗಳಿಸಿ ಅಜೇಯರಾಗುಳಿದಿದ್ದಾರೆ. ಅಪಾಯಕಾರಿ ಸ್ಟೀವ್ ಸ್ಮಿತ್ ರನ್ನು ಕೇವಲ 8 ರನ್ ಗಳಿಗೆ ಜಡೇಜಾ ಪೆವಿಲಿಯನ್ ಗಟ್ಟಿದ್ದು, ಭಾರತಕ್ಕೆ ಕೊಂಚ ಸಮಾಧಾನದ ಅಂಶ.

ಆದರೂ ಆಸ್ಟ್ರೇಲಿಯಾಕ್ಕೆ ಭಾರತದ ಮೊದಲ ಇನಿಂಗ್ಸ್ ಮೊತ್ತ ದಾಟಲು ಕೇವಲ 102 ರನ್ ಗಳಿಸಿದರೆ ಸಾಕು. ಇನ್ನೂ ಎರಡು ವಿಕೆಟ್ ಗಳು ಸುರಕ್ಷಿತವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ