ವಿರಾಟ್ ಕೊಹ್ಲಿ ಟಾಸ್ ಸೋತರೂ ಗೆಲುವು, ಗೆದ್ದರೆ ಸೋಲು!
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಬೇಕೇ ಫೀಲ್ಡಿಂಗ್ ಮಾಡಬೇಕೇ ಎಂಬ ವಿಚಾರದಲ್ಲಿ ಹಲವು ಬಾರಿ ಅವರು ಎಡವಿದ್ದಾರೆ. ವಿಚಿತ್ರವೆಂದರೆ ಟಾಸ್ ಸೋತಾಗಲೂ ಅವರು ಪಂದ್ಯ ಕಳೆದುಕೊಂಡಿದ್ದು ಕಡಿಮೆ. ಹೀಗಾಗಿ ಟಾಸ್ ಗೆದ್ದ ಬಳಿಕ ಮೊದಲು ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಸರಿಯಾದ ತೀರ್ಮಾನ ತೆಗೆದುಕೊಳ್ಳುವುದು ಅವರಿಂದ ಸಾಧ್ಯವಾಗಿಲ್ಲ. ಹೀಗಾಗಿ ಟಾಸ್ ವಿಚಾರದಲ್ಲಿ ಗೆದ್ದರೂ, ಸೋತರೂ ಅವರು ಅದೃಷ್ಟ ಹೀನರೇ ಎನ್ನುವುದು ಸಾಬೀತಾಗಿದೆ.