ಸಿರಾಜ್ ಅಬ್ಬರಕ್ಕೆ ಮೂಲೆಗುಂಪಾದ ಉಮೇಶ್ ಯಾದವ್

ಗುರುವಾರ, 26 ಆಗಸ್ಟ್ 2021 (12:15 IST)
ಲೀಡ್ಸ್: ಇತ್ತೀಚೆಗೆ ಟೀಂ ಇಂಡಿಯಾದ ಎರಡು ಟೆಸ್ಟ್ ಸರಣಿಗಳಲ್ಲಿ ವೇಗಿ ಉಮೇಶ್ ಯಾದವ್ ಗೆ ಸ್ಥಾನ ಸಿಕ್ಕಿಲ್ಲ. ಹೊಸಬರ ಅಬ್ಬರದಲ್ಲಿ ಉಮೇಶ್ ಮೂಲೆಗುಂಪಾಗುತ್ತಿದ್ದಾರೆಯೇ?


ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಆಡಿದ ಬಳಿಕ ಉಮೇಶ್ ಯಾದವ್ ಗೆ ಅವಕಾಶ ಸಿಕ್ಕಿಲ್ಲ. ಆ ಸರಣಿಯಲ್ಲಿ ಉಮೇಶ್ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದ ಬಳಿಕ ತಂಡಕ್ಕೆ ಸೇರ್ಪಡೆಯಾದವರು ಮೊಹಮ್ಮದ್ ಸಿರಾಜ್, ಶ್ರಾದ್ಧೂಲ್ ಠಾಕೂರ್.

ಈ ಇಬ್ಬರೂ ವೇಗಿಗಳು ಈಗ ಟೀಂ ಇಂಡಿಯಾದಲ್ಲಿ ಹಿರಿಯರನ್ನೂ ಮೀರಿಸುವ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಹಿರಿಯ ವೇಗಿ ಇಶಾಂತ್ ಶರ್ಮಾ ಕೂಡಾ ತಮ್ಮ ಸ್ಥಾನಕ್ಕಾಗಿ ಪೈಪೋಟಿ ನಡೆಸುವ ಸ್ಥಿತಿ ಬಂದಿದೆ. ಹೀಗಾಗಿ ಉಮೇಶ್ ಯಾದವ್ ಮೂಲೆಗುಂಪಾಗುತ್ತಿದ್ದಾರೆ ಎಂದೇ ಹೇಳಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ