ತಂಡದ ಸಂಸ್ಕೃತಿ ಬದಲಾಯಿಸಿ ವಿದೇಶದಲ್ಲಿ ಗೆಲ್ಲುವುದು ಕೊಹ್ಲಿ ಬಯಕೆ: ಕೋಚ್

ಬುಧವಾರ, 2 ಸೆಪ್ಟಂಬರ್ 2015 (15:52 IST)
ನಿನ್ನೆ ಟೀಂ ಇಂಡಿಯಾಗೆ ಕ್ರಿಕೆಟ್ ಇತಿಹಾಸದಲ್ಲಿ ಮಹತ್ವದ ದಿನವಾಗಿತ್ತು. ಶ್ರೀಲಂಕಾ ನೆಲದಲ್ಲಿ 22 ವರ್ಷಗಳ ನಂತರ ಟೆಸ್ಟ್ ಸರಣಿ ಗೆದ್ದ ಹಿರಿಮೆಗೆ ಟೀಂ ಇಂಡಿಯಾ ಪಾತ್ರವಾಯಿತು. ಈ ಜಯವು 50 ತಿಂಗಳಲ್ಲಿ ವಿದೇಶದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಪ್ರಥಮ ಜಯವಾಗಿತ್ತು.  2010-11ರ ಸೀಸನ್‌ನಲ್ಲಿ ವೆಸ್ಟ್ ಇಂಡೀಸ್‌ನಲ್ಲಿ ಭಾರತ ತಂಡ ಸರಣಿ ಜಯಗಳಿಸಿತ್ತು.
 
ಶ್ರೀಲಂಕಾದಲ್ಲಿ ಅಪರೂಪದ ಜಯವು ಕೊಹ್ಲಿಯ ಆಕ್ರಮಣಕಾರಿ ಬ್ರಾಂಡ್ ಕ್ರಿಕೆಟ್‌ನ ಸಾಧನೆಗಳೊಂದಾಗಿದೆ ಎಂದು ಕೊಹ್ಲಿಯ ಬಾಲ್ಯದ ಕೋಚ್ ರಾಜ್ ಕುಮಾರ್ ಶರ್ಮಾ ಹೇಳಿದ್ದಾರೆ. 
 
 ತಂಡವು ಶ್ರೀಲಂಕಾಗೆ ತೆರಳುವ ಮುನ್ನ ನಾವು ಮಾತುಕತೆಯಾಡಿದೆವು. ತಂಡದ ಸಂಸ್ಕೃತಿಯನ್ನು ಬದಲಾಯಿಸಿ ವಿದೇಶದಲ್ಲಿ ಗೆಲ್ಲುವ ಬಯಕೆಯ ಬಗ್ಗೆ ವಿರಾಟ್ ಸ್ಪಷ್ಟ ನಿಲುವು ಹೊಂದಿದ್ದರು. ಶ್ರೀಲಂಕಾ ಪ್ರವಾಸದಲ್ಲಿ ಹಂತಕ ಪ್ರವೃತ್ತಿಯೊಂದಿಗೆ ತೆರಳಿದ ಅವರು ಅದೇ ರೀತಿ ಆತ್ಮವಿಶ್ವಾಸ ಹೊಂದುವುದನ್ನು ತಂಡದ ಆಟಗಾರರಿಂದ ಬಯಸಿದ್ದರು.  ವಿದೇಶದಲ್ಲಿ ಗೆಲ್ಲುವುದು ಅವರ ಗುರಿಯಾಗಿತ್ತು ಎಂದು ಕೊಹ್ಲಿ ಕೋಚ್ ಮಾಧ್ಯಮಕ್ಕೆ ತಿಳಿಸಿದರು. 

ವೆಬ್ದುನಿಯಾವನ್ನು ಓದಿ