ಕೆಎಲ್ ರಾಹುಲ್ ರನ್ನು ಆಡಿಸಲು ಈ ಆಟಗಾರನನ್ನು ಕಿತ್ತು ಹಾಕಿ ಎಂದ ಸೆಹ್ವಾಗ್
ಅಫ್ಘಾನಿಸ್ತಾನ ವಿರುದ್ಧ ಅರ್ಧಶತಕ ಗಳಿಸಿದ್ದಕ್ಕೆ ಮತ್ತೊಬ್ಬ ರಾಹುಲ್ ಮೂರನೇ ಕ್ರಮಾಂಕದಲ್ಲಿ ಆಡಿದ ಎಂದು ಕೆಎಲ್ ಬಗ್ಗೆ ಹೊಗಳಿದ್ದ ಸೆಹ್ವಾಗ್ ಇದೀಗ ಐರ್ಲೆಂಡ್ ವಿರುದ್ಧ ಮೊದಲನೇ ಟಿ20 ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಬದಲು ರಾಹುಲ್ ಗೆ ಅವಕಾಶ ನೀಡಬೇಕಿತ್ತು ಎಂದಿದ್ದಾರೆ.
ರಾಹುಲ್ ಪ್ರತಿಭಾವಂತ. ಟೀಂ ಇಂಡಿಯಾ ಓಪನಿಂಗ್ ಜೋಡಿ ರೋಹಿತ್-ಧವನ್ ಇರಲಿ. ಆದರೆ ಮೂರನೇ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ ಬದಲಿಗೆ ರಾಹುಲ್ ಗೆ ಅವಕಾಶ ನೀಡಬೇಕು. ನಾಲ್ಕನೆಯವರಾಗಿ ಕೊಹ್ಲಿ ಕಣಕ್ಕಿಳಿಯಬೇಕು ಎಂದು ಸೆಹ್ವಾಗ್ ಪ್ರತಿಪಾದಿಸಿದ್ದಾರೆ. ರಾಹುಲ್ ಅಭಿಮಾನಿಗಳ ಬಯಕೆಯೂ ಇದೇ ಆಗಿತ್ತು. ಅದರಂತೇ ರಾಹುಲ್ ದ್ವಿತೀಯ ಪಂದ್ಯದಲ್ಲಿ ಆಡಿ ಸೆಹ್ವಾಗ್ ಮಾತನ್ನು ಸಮರ್ಥಿಸಿಕೊಂಡಿದ್ದಾರೆ.