ಕನ್ನಡಿಗ ಕೆಎಲ್ ರಾಹುಲ್ ಗೆ ಸೆಹ್ವಾಗ್ ನೀಡಿದ ಬಿರುದು ಎಂತಹದ್ದು ಗೊತ್ತಾ?!
ಶುಕ್ರವಾರ, 15 ಜೂನ್ 2018 (08:42 IST)
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ- ಅಫ್ಘಾನಿಸ್ತಾನ ನಡುವಿನ ಟೆಸ್ಟ್ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗಿಳಿದು ಅರ್ಧಶತಕ ಸಿಡಿಸಿದ ಕೆಎಲ್ ರಾಹುಲ್ ಗೆ ವೀರೇಂದ್ರ ಸೆಹ್ವಾಗ್ ಹೊಸದೊಂದು ನಾಮಕರಣ ಮಾಡಿದ್ದಾರೆ.
ಶಿಖರ್ ಧವನ್ ಮತ್ತು ಮುರಳಿ ವಿಜಯ್ ಅಬ್ಬರದ ಬ್ಯಾಟಿಂಗ್ ನಂತರ ಚಿನ್ನಸ್ವಾಮಿ ಮೈದಾನದಲ್ಲಿ ರಾಹುಲ್ ಬ್ಯಾಟಿಂಗ್ ಗಮನ ಸೆಳೆಯಿತು. ಧವನ್ ಔಟಾದ ಬಳಿಕ ಮೂರನೇ ಕ್ರಮಾಂಕದಲ್ಲಿ ಕೆಎಲ್ ರಾಹುಲ್ ಬ್ಯಾಟಿಂಗ್ ಗೆ ಇಳಿದಿದ್ದರು.
ಇದನ್ನು ನೋಡಿ ಸೆಹ್ವಾಗ್ ತಕ್ಷಣ ತಮ್ಮ ಟ್ವಿಟರ್ ಖಾತೆಯಲ್ಲಿ ‘ಎಷ್ಟೋ ದಿನಗಳ ನಂತರ ಮೂರನೇ ಕ್ರಮಾಂಕದಲ್ಲಿ ಮತ್ತೊಬ್ಬ ರಾಹುಲ್’ ಎಂದು ಬರೆದಿದ್ದಾರೆ. ಐಪಿಎಲ್ ನಲ್ಲಿ ಸೆಹ್ವಾಗ್ ಮೆಂಟರ್ ಆಗಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಆಡಿದ್ದ ರಾಹುಲ್ ಯಶಸ್ಸು ಕಂಡಿದ್ದರು. ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಮೂರನೇ ಕ್ರಮಾಂಕದಲ್ಲಿ ಅದೆಷ್ಟೋ ಸ್ಮರಣೀಯ ಇನಿಂಗ್ಸ್ ಗಳನ್ನು ಆಡಿ ಹೆಸರು ಪಡೆದವರು. ಹೀಗಾಗಿ ಅದೇ ಜಾಗದಲ್ಲಿ ರಾಹುಲ್ ಹೆಸರಿನವರೇ ಆಡಿದ್ದಕ್ಕೆ ಸೆಹ್ವಾಗ್ ಈ ರೀತಿ ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.