ಟೀಮ್ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು ಸಹಾ ಹಿಡಿದ ಸೂಪರ್ ಕ್ಯಾಚ್..!

ಮಂಗಳವಾರ, 7 ಮಾರ್ಚ್ 2017 (18:10 IST)
ಮೊದಲ ಪಂದ್ಯದ ಸೋಲಿನ ಕಹಿಯಲ್ಲೇ 2ನೇ ಟೆಸ್ಟ್ ಪಂದ್ಯವನ್ನಾಡಲು ಮೈದಾನಕ್ಕಿಳಿದಿದ್ದ ಭಾರತ ತಂಡದಲ್ಲಿ ಮೊದಲಿನ ಉತ್ಸಾಹವೇ ಇರಲಿಲ್ಲ. ಬೇಸರದಲ್ಲಿದ್ದ ಭಾರತ ತಂಡವನ್ನ ಮೊದಲ ಇನ್ನಿಂಗ್ಸ್`ನಲ್ಲಿ ಮಕಾಡೆ ಮಲಗಿಸಿದ್ದರು. 2ನೇ ಇನ್ನಿಂಗ್ಸ್`ನಲ್ಲಿ 188 ರನ್ ಟಾರ್ಗೆಟ್ ನೀಡಿ ಮೈದಾನಕ್ಕಿಳಿದ ಭಾರತ ತಂಡ ಗೆಲ್ಲಲೇಬೇಕೆಂಬ ಪತನತೊಟ್ಟಿತ್ತು. ದಕ್ಕೆ ನಿದರ್ಶನ ಮೈದಾನದಲ್ಲಿ ಆಟಗಾರರ ಬಾಡಿ ಲಾಂಗ್ವೇಜ್. ಇದರಲ್ಲಿ ಅತ್ಯಂತ ಗಮನಸೆಳೆದಿದ್ದು ವೃದ್ಧಿಮಾನ್ ಸಹಾ ಹಿಡಿದ ಕ್ಯಾಚ್.


ಅಶ್ವಿನ್ ಎಸೆದ ಚೆಂಡು ಮ್ಯಾಥ್ಯೂ ವೇಡ್ ಬ್ಯಾಟಿಗೆ ಬಡಿದು ಎಡಬದಿಗೆ ಚಿಮ್ಮಿತ್ತು. ವಿಕೆಟ್ ಹಿಂಬದಿಯಿಂದ ಜಿಗಿದ ಸಹಾ ಭರ್ಜರಿ ಕ್ಯಾಚ್ ಹಿಡಿದರು. ಸಹಾ ಹಿಡಿದ  ಕ್ಯಾಚ್ ಇಡೀ ತಂಡದ ಆತ್ಮಸ್ಥೈರ್ಯವನ್ನ ಪ್ರತಿಬಿಂಬಿಸುವಂತಿತ್ತು. ನಾಯಕ ಕೊಹ್ಲಿ, ಅಶ್ವಿನ್ ಸಂತಸಕ್ಕೆ ಪಾರವೇ ಇರಲಿಲ್ಲ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ



ವೆಬ್ದುನಿಯಾವನ್ನು ಓದಿ