ರವಿ ಶಾಸ್ತ್ರಿಗೆ ಕೋಚ್ ಸಂದರ್ಶನ ಪ್ರಕ್ರಿಯೆಯಲ್ಲಿ ಗಂಗೂಲಿ ಏಕೆ ಹಾಜರಿರಲಿಲ್ಲ?

ಶನಿವಾರ, 25 ಜೂನ್ 2016 (14:24 IST)
ಬಿಸಿಸಿಐ ಕ್ರಿಕೆಟ್ ಸಲಹಾ ಸಮಿತಿಯಲ್ಲಿ ಸಚಿನ್ ತೆಂಡೂಲ್ಕರ್, ಗಂಗೂಲಿ ಮತ್ತು ಲಕ್ಷ್ಮಣ್ ಇದ್ದು, ಸಂಜಯ್ ಜಗದಾಲೆ ಮುಖ್ಯ ಸಮನ್ವಯಕಾರರಾಗಿದ್ದರು. ಕೋಚಿಂಗ್ ಹುದ್ದೆಗೆ ಅನಿಲ್ ಕುಂಬ್ಳೆಯನ್ನು ಆಯ್ಕೆ ಮಾಡುವ ಮುಂಚೆ, ಸಿಎಸಿ ಕೊಲ್ಕತಾದಲ್ಲಿ ಜೂನ್ 21ರಂದು ಸಂದರ್ಶನಗಳನ್ನು ನಡೆಸಿತು.

 ಆದರೆ ಮಾಜಿ ಟೀಂ ಡೈರೆಕ್ಟರ್ ರವಿ ಶಾಸ್ತ್ರಿ ತಮ್ಮ ಸಂದರ್ಶನದಲ್ಲಿ ಗಂಗೂಲಿ ಹಾಜರಿರಲಿಲ್ಲವೆಂಬ ಕುತೂಹಲಕಾರಿ ಸಂಗತಿ ಬಯಲು ಮಾಡಿದ್ದಾರೆ.
 
 ಮೀಟಿಂಗ್ ಚೆನ್ನಾಗಿತ್ತು. ವಿವಿಎಸ್, ಸಚಿನ್, ಸಂಜಯ್ ಉತ್ತಮ ಪ್ರಶ್ನೆಗಳನ್ನು ಕೇಳಿದರು. ನಾನು ತಂಡವನ್ನು ಮುನ್ನಡೆಸುವ ರೀತಿಯನ್ನು ಕುರಿತು ಹೇಳಿದೆ. ಎಲ್ಲ ಮಾದರಿಯ ಆಟಗಳಲ್ಲಿ ನಾನು ಯಾವ ಯೋಜನೆ ಹಾಕಿದ್ದೇನೆ, ವೇಗದ ಬೌಲರುಗಳನ್ನು ನಾವು ಯಾವ ರೀತಿ ನಿರ್ವಹಿಸಬೇಕು ಮುಂತಾದ ಪ್ರಶ್ನೆಗಳನ್ನು ಕೇಳಿದರು. ಗಂಗೂಲಿ ಕೇಳಿದ ಪ್ರಶ್ನೆಗಳ ಬಗ್ಗೆ ವರದಿಗಾರರು ಕೇಳಿದಾಗ, ವಾಸ್ತವವಾಗಿ ಗಂಗೂಲಿ ಅಲ್ಲಿ ಇರಲಿಲ್ಲ ಎಂದು ಶಾಸ್ತ್ರಿ ಬಹಿರಂಗ ಮಾಡಿದರು. ಸಂದರ್ಶನಕಾರರಲ್ಲಿ ಒಬ್ಬರಾದ ಗಂಗೂಲಿ ಗೈರುಹಾಜರಾಗಿದ್ದು ಏಕೆಂದು ಶಾಸ್ತ್ರಿ ಕೇಳಲಿಲ್ಲ.
 
ಅದನ್ನು ನಾನು ಕೇಳುವುದು ಸಾಧ್ಯವಾಗುವುದಿಲ್ಲ. ನಾನು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದೆ. ಮೂವರಿಂದ ಉತ್ತಮ ಪ್ರಶ್ನೆಗಳು ಮೂಡಿಬಂತು ಎಂದು ಶಾಸ್ತ್ರಿ ಹೇಳಿದರು. 
 
ತಾವು ಆಯ್ಕೆಯಾಗದಿರುವ ಕುರಿತು ತಮ್ಮ ನಿರಾಶೆಯನ್ನೂ ಅವರು ವ್ಯಕ್ತಪಡಿಸಿದರು. ಅನಿಲ್ ಕುಂಬ್ಳೆ ಸಾಧನೆಯನ್ನು ಗಮನಿಸಿದಾಗ ಅವರನ್ನು ಆಯ್ಕೆ ಮಾಡಿದ್ದು ತಪ್ಪೆಂದು ಯಾರೂ ಹೇಳುವುದಿಲ್ಲ. ಆದರೆ ರವಿಶಾಸ್ತ್ರಿಯನ್ನು ಸಂದರ್ಶಿಸಲು ಗಂಗೂಲಿ ಹಾಜರಿರದೇ ಇರಲು ಕಾರಣವೇನು, ಅಂದರೆ ಶಾಸ್ತ್ರಿಯನ್ನು ಆಯ್ಕೆ ಮಾಡಲು ಗಂಗೂಲಿಗೆ ಮನಸ್ಸಿರಲಿಲ್ಲವೇ? ಎಂಬ ಪ್ರಶ್ನೆ ಉದ್ಭವಿಸುತ್ತದೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ