ಅದ್ಭುತ: ಮಾಹಿಯ ಮ್ಯಾಜಿಕ್ ರನ್ ಔಟ್ ( ವಿಡಿಯೋ)

ಗುರುವಾರ, 27 ಅಕ್ಟೋಬರ್ 2016 (14:37 IST)
ಟೀಂ ಇಂಡಿಯಾ ನಾಲ್ಕನೇ ಏಕದಿನ ಪಂದ್ಯ ಸೋತಿರಬಹುದು. ಆದರೆ ನ್ಯೂಜಿಲೆಂಡ್ ತಂಡದ ಪ್ರಮುಖ ಬ್ಯಾಟ್ಸ್‌ಮನ್ ರಾಸ್ ಟೇಲರ್ ಅವರನ್ನು ನಾಯಕ ಧೋನಿ ರನೌಟ್ ಮಾಡಿದ ಪರಿ ಈಗ ಭಾರೀ ಸದ್ದು ಮಾಡುತ್ತಿದೆ.
ವಿಕೆಟ್ ಹಿಂದೆ ಚುರುಕಿನ ರನೌಟ್, ಸ್ಟಂಪ್ ಔಟ್ ಮಾಡುವುದರಲ್ಲಿ ಧೋನಿ ನಿಸ್ಸೀಮ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದಕ್ಕೆ ಉದಾಹರಣೆ ನಿನ್ನೆಯ ಪಂದ್ಯ.
 
46 ನೇ ಓವರಿನಲ್ಲಿ ಉಮೇಶ್ ಯಾದವ್ ರಾಸ್ ಟೇಲರ್‌ಗೆ ಬೌಲ್ ಮಾಡಿದ್ದರು. ಹಲವು ದಿನಗಳಿಂದ ಫಾರ್ಮ್‌ನಲ್ಲಿರದಿದ್ದ ಟೇಲರ್ ಈ ಪಂದ್ಯದಲ್ಲಿ ಕೊಂಚ ಬ್ಯಾಟಿಂಗ್‌ಗೆ ಕುದುರಿದ್ದರು. ಫೈನ್ ಲೆಗ್ ಕಡೆಗೆ ಬಾಲ್ ತಳ್ಳಿದ ಟೇಲರ್ ರನ್ ಕದಿಯಲು ಓಡಿದ್ದರು.
 
ಅದೇ ಸಮಯಕ್ಕೆ ಬಾಲ್ ಫೀಲ್ಡ್ ಮಾಡಿದ ಧವಳ್ ಕುಲಕರ್ಣಿ ಧೋನಿ ಕೈಗೆ ಬಾಲ್ ಎಸೆದಿದ್ದರು. ಇನ್ನೂ ವಿಕೆಟ್ ಹತ್ತಿರ ಧೋನಿ ತಲುಪಿರಲಿಲ್ಲ. ಈ ಹಂತದಲ್ಲಿ ಅವರು ವಿಕೆಟ್ ಗೆ ಬೆನ್ನು ಮಾಡಿ ನಿಂತುಕೊಂಡು ಸರಿಯಾಗಿ ವಿಕೆಟ್‌ಗೆ ಬಾಲ್ ತಳ್ಳಿದರು. ರನ್ ಕದಿಯುವ ಯತ್ನದಲ್ಲಿ ರಾಸ್ ಟೇಲರ್ ರನೌಟ್ ಆಗಿದ್ದರು!

ಅದ್ಭುತ: ಮಾಹಿಯ ಮ್ಯಾಜಿಕ್ ರನ್ ಔಟ್ ( ವಿಡಿಯೋ)


 

Watch the Mahi magic on loop #INDvNZ https://t.co/btMoJF0xC3

— BCCI (@BCCI) October 26, 2016

ವೆಬ್ದುನಿಯಾವನ್ನು ಓದಿ