ನಾವು ನಂಬರ್ ಒನ್ ಯಾಕಾಗಿದ್ದೇವೆಂದು ತೋರಿಸುತ್ತೇವೆ: ಮಾರ್ಕೆಲ್

ಬುಧವಾರ, 29 ಜುಲೈ 2015 (17:23 IST)
ನಾವು ನಂಬರ್ ಒನ್ ಟೆಸ್ಟ್ ತಂಡ ಯಾಕೆ ಆಗಿದ್ದವೆಂದು ಬಾಂಗ್ಲಾದೇಶಕ್ಕೆ ತೋರಿಸಲು ದಕ್ಷಿಣ ಆಫ್ರಿಕಾ ಯೋಜಿಸಿದೆ. ಡ್ರಾ ಆಗಿದ್ದ ಮೊದಲ ಟೆಸ್ಟ್‌ನಲ್ಲಿ ತಮ್ಮ ಸ್ವಾಭಾವಿಕ ಆಟ ಆಡುವುದರಲ್ಲಿ ದ.ಆಫ್ರಿಕಾ ವಿಫಲವಾಗಿತ್ತು.  ಈಗ ನಾವು ಜಗತ್ತಿನಲ್ಲಿ ನಂ. 1 ತಂಡ ಯಾಕಾಗಿದ್ದೇವೆಂದು ತೋರಿಸುವ ಕಾಲ ಬಂದಿದೆ ಎಂದು ವೇಗಿ ಮಾರ್ನ್ ಮಾರ್ಕೆಲ್ ತಿಳಿಸಿದ್ದಾರೆ. 
 
ಚಿತ್ತಗಾಂಗ್ ಟೆಸ್ಟ್ ಮಳೆಯಿಂದ ಕಡೆಯ ಎರಡುದಿನಗಳ ಆಟ ರದ್ದಾಯಿತು. ಆದರೆ ಆತಿಥೇಯರು ಹರಿಣಗಳ ಮೇಲೆ ಮೊದಲ ಮೂರು ದಿನಗಳ ಕಾಲ ಒತ್ತಡ ಹಾಕಿತು. ದಕ್ಷಿಣ ಆಫ್ರಿಕಾವನ್ನು ಬಾಂಗ್ಲಾ 248 ರನ್‌ಗೆ ನಿರ್ಬಂಧಿಸಿ ಆತಿಥೇಯರು 78 ರನ್ ಲೀಡ್ ಗಳಿಸಿತ್ತು. ಪಂದ್ಯ ರದ್ದಾದಾಗ ಬಾಂಗ್ಲಾದೇಶ ಇನ್ನೂ 17 ರನ್ ಲೀಡ್‌ನಲ್ಲಿತ್ತು. 
 
ಎರಡನೇ ಟೆಸ್ಟ್ ಶೇರ್ ಎ ಬಾಂಗ್ಲಾ ಸ್ಟೇಡಿಯಂನಲ್ಲಿ ಗುರುವಾರ ಆರಂಭವಾಗಲಿದ್ದು, ನಾವು 20 ವಿಕೆಟ್ ಪಡೆಯುವ ಅಗತ್ಯವಿದೆ. ನಾವು ಅವರ ಬ್ಯಾಟಿಂಗ್ ಲೈನ್ ಅಪ್ ನೋಡಿ ಭಿನ್ನ ಯೋಜನೆಗಳನ್ನು ಹಾಕುತ್ತೇವೆ. ಅದು ಎರಡನೇ ಟೆಸ್ಟ್‌ನಲ್ಲಿ ಫಲ ನೀಡುತ್ತದೆಂದು ಆಶಿಸುವುದಾಗಿ ಮಾರ್ಕೆಲ್ ಹೇಳಿದರು.
 
ಹವಾಮಾನ ಬದಲಾವಣೆಯಿಂದ ತಮಗೆ ಸಂತೋಷವಾಗಿದೆ ಎಂದು ಮಾರ್ಕೆಲ್ ಹೇಳಿದ್ದು, ಮೊದಲ ಟೆಸ್ಟ್‌ಗೆ ಡ್ರಾನಲ್ಲಿ ತೆರೆಬಿದ್ದ ಬಳಿಕ ಕಳೆದ ನಾಲ್ಕು ದಿನಗಳಿಂದ ಮಳೆಯಿಂದ ಆಟಗಾರರು ಹೊಟೆಲ್‌ನೊಳಗೆ ಉಳಿದು, ಒಳಾಂಗಣದಲ್ಲಿ ಅಭ್ಯಾಸ ನಡೆಸಿದ್ದರು. 
 

ವೆಬ್ದುನಿಯಾವನ್ನು ಓದಿ