ಅಭ್ಯಾಸ ಪಂದ್ಯದಲ್ಲಿ ಭಾರತ ಮೇಲುಗೈ: ವೆಸ್ಟ್‌ಇಂಡೀಸ್ 180 ಆಲೌಟ್

ಶುಕ್ರವಾರ, 15 ಜುಲೈ 2016 (11:16 IST)
ಭಾರತ ಮತ್ತು ವೆಸ್ಟ್ ಇಂಡೀಸ್ ಅಧ್ಯಕ್ಷರ ಇಲೆವನ್ ನಡುವೆ ನಡೆದ ಎರಡನೇ ಪಂದ್ಯದಲ್ಲಿ ಬಿಗಿಯಾದ ಬೌಲಿಂಗ್ ದಾಳಿ ಮಾಡಿದ ಭಾರತ ತಂಡ ವೆಸ್ಟ್ ಇಂಡೀಸ್‌ ತಂಡವನ್ನು 180 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ ಮೇಲುಗೈ ಸಾಧಿಸಿದೆ. ಇದಕ್ಕೆ ಪ್ರತಿಯಾಗಿ ಭಾರತ ತಂಡ 93ಕ್ಕೆ 3 ವಿಕೆಟ್ ಕಳೆದುಕೊಂಡಿದೆ.

ಲೋಕೇಶ್ ರಾಹುಲ್ ಅಜೇಯ 30 ರನ್ ಮತ್ತು ವಿರಾಟ್ ಕೊಹ್ಲಿ 0 ರನ್‌ನೊಂದಿಗೆ ಅಜೇಯರಾಗಿ ಉಳಿದಿದ್ದಾರೆ. ಭಾರತದ ಪರ ಕೆ.ಎಲ್. ರಾಹುಲ್ ಸದೃಢ ಆಟವಾಡುತ್ತಿದ್ದು, ಚೇತೇಶ್ವರ್ ಪೂಜಾರ್(28) ದಿನದ ಕೊನೆಯ ಎಸೆತದಲ್ಲಿ ಔಟಾದರು. ಓಪನರ್‌‍ಗಳಾದ ಮುರಳಿ ವಿಜಯ್(23) ಮತ್ತು ಶಿಖರ್ ಧವನ್(9) ಅವರನ್ನು ವೆಸ್ಟ್ ಇಂಡೀಸ್ ಬೌಲರುಗಳು ಬೇಗನೇ ಔಟ್ ಮಾಡಿದರು. ವೆಸ್ಟ್ ಇಂಡೀಸ್ ತಂಡವು ಭಾರತದ ಸ್ಪಿನ್ನರುಗಳಿಗೆ ಆಡಲು ತಿಣುಕಾಡಿತು. ಜಡೇಜಾ 13 ಓವರುಗಳಲ್ಲಿ 16 ರನ್ ನೀಡಿ ನಿಖರ ಬೌಲಿಂಗ್ ಮೂಲಕ 3 ವಿಕೆಟ್ ಕಬಳಿಸಿದರು. ಅಶ್ವಿನ್ 62 ರನ್ನಿಗೆ 3 ವಿಕೆಟ್ ಮತ್ತು ಮಿಶ್ರಾ 45 ರನ್ನಿಗೆ 2 ವಿಕೆಟ್ ಕಬಳಿಸುವ ಮೂಲಕ ಆತಿಥೇಯ ತಂಡವು 62. 5 ಓವರುಗಳಲ್ಲಿ ಆಲೌಟಾಯಿತು.
 
 ರೂಕಿ ಶಾರ್ದುಲ್ ಠಾಕುರ್(24ಕ್ಕೆ 1) ಲೈನ್ ಮತ್ತು ಲೆಂಗ್ತ್ ಬೌಲಿಂಗ್‌ನಿಂದ ನಾಯಕ ಲೀಯನ್ ಜಾನ್ಸನ್ ಅವರನ್ನು ಔಟ್ ಮಾಡಿದರು. ನಿಧಾನಗತಿಯ ಪಿಚ್‌ನಲ್ಲಿ ಅಶ್ವಿನ್ ಬೌನ್ಸ್ ಎಸೆತಗಳನ್ನು ಚೆನ್ನಾಗಿ ಎಸೆದರು. ಓಪನರ್ ಕ್ಯಾಂಪ್‌ಬೆಲ್ ಅವರು ಅಶ್ವಿನ್ ಬೌಲಿಂಗ್‌ನಲ್ಲಿ ಸ್ಪಂಪ್ ಔಟ್ ಆದರು. ಬಳಿಕ ಕಾರ್ನ್‌ವಾಲ್ ಮತ್ತು ಮೋಟಿ ಕೂಡ ಅಶ್ವಿನ್‌ಗೆ ಔಟಾದರು.
 
 ಕಾರ್ನ್‌ವಲ್ ಅಧ್ಯಕ್ಷರ ಇಲೆವನ್ ಪರ ಅತ್ಯಧಿಕ ರನ್ ಸ್ಕೋರ್ ಮಾಡಿ 56 ಎಸೆತಗಳಲ್ಲಿ ಏಳು ಬೌಂಡರಿಗಳನ್ನು ಗಳಿಸಿದರು. ಆದರೆ ದಿನದ ನಿಜವಾದ ಸ್ಟಾರ್ ರವೀಂದ್ರ ಜಡೇಜಾ. ಅವರು 13 ಓವರುಗಳಲ್ಲಿ ಮೂರು ವಿಕೆಟ್ ಕಬಳಿಸಿ  ಮಧ್ಯಮಕ್ರಮಾಂಕದ ಪತನಕ್ಕೆ ಕಾರಣರಾದರು. ಅವರು ಜರ್ಮೈನ್ ಬ್ಲಾಕ್‌ವುಡ್, ವಿಷುವಾಲ್ ಸಿಂಗ್ ಮತ್ತು ಮಾಂಟ್ಕಿನ್ ಹಾಡ್ಜ್ ಅವರನ್ನು ಔಟ್ ಮಾಡಿದರು.
ಸ್ಕೋರು ವಿವರ: 
ವೆಸ್ಟ್ ಇಂಡೀಸ್ 180ಕ್ಕೆ ಆಲೌಟ್(62.4 ಓವರ್)
 ಜಾನ್ ಕ್ಯಾಂಪ್‌ಬೆಲ್ 34, ಬ್ಲ್ಯಾಕ್‌ವುಡ್ 36, ಕಾರ್ನ್‌ವಾಲ್ 41 ರನ್
ಬೌಲಿಂಗ್: ಶಾರ್ದುಲ್ ಠಾಕುರ್  1 ವಿಕೆಟ್ , ಅಶ್ವಿನ್ 3 , ಸ್ಟುವರ್ಟ್ ಬಿನ್ನಿ 1 , ಜಡೇಜಾ 3 ಮ್ತು ಅಮಿತ್ ಮಿಶ್ರಾ 2 ವಿಕೆಟ್ 
 ಭಾರತ ತಂಡ 93ಕ್ಕೆ 3 ವಿಕೆಟ್(25.3 ಓವರ್)
ಮುರಳಿ ವಿಜಯ್ 23, ಲೋಕೇಶ್ ರಾಹುಲ್ 30 ನಾಟೌಟ್ ಮತ್ತು ಚೇತೇಶ್ವರ ಪೂಜಾರಾ 28 ರನ್
 ಬೌಲಿಂಗ್:  ಜಾಸನ್ ಡೇವ್ಸ್ 1 ವಿಕೆಟ್, ಕೆಮಾರ್ ಹೋಲ್ಡರ್ 1 ವಿಕೆಟ್ ಮತ್ತು ಕಾರ್ನ್‌ವಾಲ್ 1 ವಿಕೆಟ್ 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

ವೆಬ್ದುನಿಯಾವನ್ನು ಓದಿ