ಚಂಢೀಗಢ: ಐಪಿಎಲ್ 2025 ರಲ್ಲಿ ಚಿನ್ನಸ್ವಾಮಿ ಮೈದಾನದಲ್ಲಿ ನಿನ್ನೆ ಪಂಜಾಬ್ ವಿರುದ್ಧ ಸೋತ ಹತಾಶೆ ಆರ್ ಸಿಬಿಯನ್ನು ಇನ್ನೂ ಮರೆಸಿಲ್ಲ. ಆಗಲೇ ನಾಳೆ ಪಂಜಾಬ್ ವಿರುದ್ಧ ಮತ್ತೊಂದು ಪಂದ್ಯಕ್ಕೆ ರೆಡಿಯಾಗಿದೆ. ಬೆಂಗಳೂರಲ್ಲೇನೋ ನಿಮಗೆ ಪಂದ್ಯ ಬಿಟ್ಟುಕೊಟ್ವಿ, ಪಂಜಾಬ್ ನಲ್ಲಿ ಬಿಡೋ ಮಾತೇ ಇಲ್ಲ ಅಂತಿದ್ದಾರೆ ಫ್ಯಾನ್ಸ್.
ಹೀಗಾಗಿ ಅಭಿಮಾನಿಗಳು ನಿಮ್ಮ ತವರಿನಲ್ಲೇ ನಮ್ಮ ತಂಡ ನಿಮ್ಮನ್ನು ಸೋಲಿಸುತ್ತೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸವಾಲು ಹಾಕಿದ್ದಾರೆ. ಆರ್ ಸಿಬಿ ಇದುವರೆಗೆ ಎಲ್ಲಾ ಪಂದ್ಯಗಳಲ್ಲಿ ತವರಿನಲ್ಲಿ ಮಾತ್ರ ದುರ್ಬಲ. ಆದರೆ ಹೊರಗಿನ ಪಂದ್ಯಗಳಲ್ಲಿ ಪ್ರಬಲ ತಂಡಗಳನ್ನೂ ಹೊಸಕಿ ಹಾಕಿದೆ. ಹೀಗಾಗಿ ಬೆಂಗಳೂರಲ್ಲಿ ಬಿಟ್ಟುಕೊಟ್ಟಿದ್ದೇವೆ, ಪಂಜಾಬ್ ನಲ್ಲಿ ಬಿಡೋ ಮಾತೇ ಇಲ್ಲ ಅಂತಿದ್ದಾರೆ ಫ್ಯಾನ್ಸ್.