ಲಾರ್ಡ್ಸ್ ಟೆಸ್ಟ್ ಸೋತ ಬಳಿಕ ಕೆಲ ಕಾಲ ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂನಲ್ಲಿ ನಡೆದಿದ್ದೇನು?!
ಕ್ರೀಡಾ ವಾಹಿನಿಯೊಂದರ ಪ್ರಕಾರ ಸೋಲಿನ ಬಳಿಕ ಲಾರ್ಡ್ಸ್ ಡ್ರೆಸ್ಸಿಂಗ್ ರೂಂನ ಟೀಂ ಇಂಡಿಯಾ ಕೊಠಡಿ ಕೆಲವು ನಿಮಿಷಗಳ ಕಾಲ ಬಾಗಿಲು ಬಂದ್ ಆಗಿತ್ತು. ಈ ಸಂದರ್ಭದಲ್ಲಿ ಕೋಚ್ ಮತ್ತು ನಾಯಕ ತಮ್ಮ ಆಟಗಾರರಿಗೆ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಒಂದು ವೇಳೆ ಮುಂದಿನ ಪಂದ್ಯಗಳಲ್ಲಿ ಉಳಿಯಬೇಕೆಂದರೆ ಜವಾಬ್ಧಾರಿಯಿಂದ, ಸಾಮರ್ಥ್ಯಕ್ಕೆ ತಕ್ಕಂತೆ ಆಡಬೇಕಿದೆ ಎಂದು ಕೋಚ್ ರವಿಶಾಸ್ತ್ರಿ ಮತ್ತು ವಿರಾಟ್ ಕೊಹ್ಲಿ ತಾಕೀತು ಮಾಡಿದ್ದಾರೆ ಎಂದು ವಾಹಿನಿ ವರದಿ ಮಾಡಿದೆ.