ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗೊಳಗಾದ ಕೆಎಲ್ ರಾಹುಲ್

ಮಂಗಳವಾರ, 14 ಆಗಸ್ಟ್ 2018 (09:47 IST)
ಲಾರ್ಡ್ಸ್: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಆರಂಭಿಕ ಸ್ಥಾನ ಸಿಕ್ಕಿಯೂ ಸಾಮರ್ಥ್ಯಕ್ಕೆ ಪ್ರದರ್ಶನ ನೀಡದ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಟ್ರೋಲ್ ಗೊಳಗಾಗಿದ್ದಾರೆ.
 

ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ರಾಹುಲ್ ವಿರುದ್ಧ ಕೆಂಡ ಕಾರಿದ್ದಾರೆ. ಕೆಎಲ್ ರಾಹುಲ್, ಮುರಳಿ ವಿಜಯ್ ಬದಲು ಮಹಿಳಾ ತಂಡದ ಹರ್ಮನ್ ಪ್ರೀತ್, ಸ್ಮೃತಿ ಮಂದನ ಕರೆಸಿ. ಅವರೇ ಇವರಿಗಿಂತ ಚೆನ್ನಾಗಿ ಆಡ್ತಾರೆ ಎಂದು ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ.

ಕೆಎಲ್ ರಾಹುಲ್ ಬಹುಶಃ ಆರನೇ ಟೆಸ್ಟ್ ಪಂದ್ಯದಲ್ಲಿ ಸರಿಯಾಗಿ ಆಡಬಹುದು ಎಂದು ಅಭಿಮಾನಿಯೊಬ್ಬರು ಕಾಲೆಳೆದಿದ್ದಾರೆ. ಇನ್ನು ಕೆಲವರು ರಾಹುಲ್, ವಿಜಯ್, ಧವನ್, ದಿನೇಶ್ ಕಾರ್ತಿಕ್ ಎಲ್ಲಾ ಇನ್ನೂ ಯಾಕಾದರೂ ತಂಡದಲ್ಲಿದ್ದಾರೋ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ