RCB Captain: ಆರ್ ಸಿಬಿಗೆ ಹೊಸ ಕ್ಯಾಪ್ಟನ್ ಯಾರು, ಕ್ಲೂ ಕೊಟ್ಟ ಫ್ರಾಂಚೈಸಿ: ಕೆಲವೇ ಕ್ಷಣಗಳಲ್ಲಿ ರಿವೀಲ್

Krishnaveni K

ಗುರುವಾರ, 13 ಫೆಬ್ರವರಿ 2025 (11:55 IST)
Photo Credit: X
ಬೆಂಗಳೂರು: ಐಪಿಎಲ್ 2025 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನಾಯಕ ಯಾರು ಎಂಬ ಪ್ರಶ್ನೆಗೆ ಕೆಲವೇ ಕ್ಷಣಗಳಲ್ಲಿ ಉತ್ತರ ಸಿಗಲಿದೆ. ಈ ಬಗ್ಗೆ ಫ್ರಾಂಚೈಸಿ ಒಂದು ಸುಳಿವು ಕೂಡಾ ಕೊಟ್ಟಿದೆ.

ಇಂದು ಆರ್ ಸಿಬಿ ತನ್ನ ಹೊಸ ನಾಯಕನ ಘೋಷಣೆ ಮಾಡಲಿದೆ. ಈ ಬಗ್ಗೆ ನಿನ್ನೆಯಿಂದಲೇ ಸುದ್ದಿ ಹರಿದಾಡುತ್ತಿತ್ತು. ಇಂದು ಅಧಿಕೃತ ಪೋಸ್ಟ್ ಒಂದನ್ನು ಮಾಡಿರುವ ಆರ್ ಸಿಬಿ ಆರ್ ಸಿಬಿ ಕ್ಯಾಪ್ಟನ್ ಯಾರು ಎಂದು ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದೆ.

ಕೆಲವೇ ಕ್ಷಣಗಳಲ್ಲಿ ನಾವು ಹೇಳಲಿದ್ದೇವೆ. ಆದರೆ ಅದಕ್ಕೆ ಮೊದಲು ಒಂದು ಕ್ಲೂ ಕೊಡುತ್ತೇವೆ. ಅವರು ಭಾರತೀಯರೇ ಆಗಿರುತ್ತಾರೆ ಎಂದು ಇದುವರೆಗೆ ಆರ್ ಸಿಬಿಯನ್ನು ಮುನ್ನಡೆಸಿರುವ ನಾಯಕರ ಫೋಟೋವನ್ನೊಳಗೊಂಡ ಪೋಸ್ಟ್ ಒಂದನ್ನು ಪ್ರಕಟಿಸಿದೆ.

ಆರ್ ಸಿಬಿ ಇಂತಹದ್ದೊಂದು ಪೋಸ್ಟ್ ಮಾಡುತ್ತಿದ್ದಂತೇ ಫ್ಯಾನ್ಸ್ ಗಳಲ್ಲಿ ಸಂಚಲನ ಮೂಡಿದೆ. ಹಲವರು ತಮ್ಮದೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಬಹುತೇಕರು ವಿರಾಟ್ ಕೊಹ್ಲಿಯೇ ನಾಯಕರಾಗಲಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಮತ್ತೆ ಕೆಲವರು ರಜತ್ ಪಟಿದಾರ್ ಅಥವಾ ಯಶ್ ದಯಾಳ್ ಆಗಿರಬಹುದು ಎಂದು ಊಹಿಸಿದ್ದರೆ. ನಿಮ್ಮೆಲ್ಲಾ ಅನುಮಾನಗಳಿಗೆ ಕೆಲವೇ ಕ್ಷಣಗಳಲ್ಲಿ ಉತ್ತರ ಸಿಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ