ಟೀಂ ಇಂಡಿಯಾದ ಕೆಟ್ಟ ಫೀಲ್ಡರ್ ಯಾರು? ಕೋಚ್ ನಿಂದಲೇ ರಹಸ್ಯ ಬಯಲು

ಶುಕ್ರವಾರ, 21 ಜೂನ್ 2019 (11:12 IST)
ಲಂಡನ್: ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ನೀಡುತ್ತಾ ಮುನ್ನುಗ್ಗುತ್ತಿದೆ. ಈ ನಡುವೆ ಟೀಂ ಇಂಡಿಯಾದ ಕ್ರಿಕೆಟಿಗರ ಸಾಮರ್ಥ್ಯದ ಬಗ್ಗೆ ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ರಹಸ್ಯ ಬಯಲು ಮಾಡಿದ್ದಾರೆ.


ಟೀಂ ಇಂಡಿಯಾದಲ್ಲಿ ಅತ್ಯುತ್ತಮ ಫೀಲ್ಡರ್ ಗಳಿದ್ದಾರೆ. ಹಾಗೆಯೇ ಕೆಟ್ಟದಾಗಿ ಫೀಲ್ಡಿಂಗ್ ಮಾಡುವವರೂ ಇದ್ದಾರೆ. ಹಾಗಿದ್ದರೆ ಟೀಂ ಇಂಡಿಯಾದ ಅತೀ ಕೆಟ್ಟ ಫೀಲ್ಡರ್ ಯಾರು? ಈ ಪ್ರಶ್ನೆಗೆ ಶ್ರೀಧರ್ ಉತ್ತರಿಸಿದ್ದಾರೆ.

‘ಟೀಂ ಇಂಡಿಯಾ ಕ್ರಿಕೆಟಿಗರ ಪೈಕಿ ಕೆಟ್ಟ ಫೀಲ್ಡರ್ ಎಂದರೆ ಸ್ಪಿನ್ನರ್ ಯಜುವೇಂದ್ರ ಚಾಹಲ್. ಹಾಗಿದ್ದರೂ ಅವರು ತಮ್ಮ ವೀಕ್ನೆಸ್ ಸರಿಪಡಿಸಿಕೊಳ್ಳಲು ಶ್ರಮವಹಿಸುತ್ತಿದ್ದಾರೆ. ಅವರ ಪ್ರದರ್ಶನದಲ್ಲಿ ಸುಧಾರಣೆ ತರಲು ಯತ್ನಿಸುತ್ತಿದ್ದಾರೆ’ ಎಂದು ಶ್ರೀಧರ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ