ಆರ್ ಸಿಬಿ ಯಾಕೆ ಕೆಎಲ್ ರಾಹುಲ್ ರನ್ನು ಖರೀದಿಸಿಲ್ಲ: ಕಾರಣ ಕೇಳಿದ್ರೆ ಶಾಕ್ ಆಗ್ತೀರಿ

Krishnaveni K

ಸೋಮವಾರ, 25 ನವೆಂಬರ್ 2024 (11:50 IST)
ದುಬೈ: ಈ ಬಾರಿ ಐಪಿಎಲ್ ಮೆಗಾ ಹರಾಜಿನಲ್ಲಿ ಕನ್ನಡಿಗ ಕೆಎಲ್ ರಾಹುಲ್ ರನ್ನು ಆರ್ ಸಿಬಿ ತಂಡ ಖರೀದಿಸಲಿದೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಕೊನೆಗೂ ಆರ್ ಸಿಬಿ ಕನ್ನಡಿಗನನ್ನು ಕಡೆಗಣಿಸಿತು. ಅಷ್ಟಕ್ಕೂ ರಾಹುಲ್ ರನ್ನು ಖರೀದಿ ಮಾಡದೇ ಇರುವುದಕ್ಕೆ ಕಾರಣವೇನು ಗೊತ್ತಾ?

ಕೆಎಲ್ ರಾಹುಲ್ ಹೆಸರು ಬಿಡ್ಡಿಂಗ್ ಗೆ ಬಂದಾಗ ಆರ್ ಸಿಬಿ ಮೊದಲು ಕೈ ಎತ್ತಿತ್ತು. ಆದರೆ 10 ಕೋಟಿ ರೂ. ದಾಟಿದ ಬಳಿಕ ಬಿಡ್ಡಿಂಗ್ ನಿಂದ ಹಿಂದೆ ಸರಿಯಿತು. ಅಂತಿಮವಾಗಿ ಕೆಎಲ್ ರಾಹುಲ್ 14 ಕೋಟಿ ರೂ.ಗೆ ಡೆಲ್ಲಿ ಕ್ಯಾಪಿಟಲ್ಸ್ ಪರ ಬಿಕರಿಯಾದರು. ಇದರಿಂದ ಆರ್ ಸಿಬಿ ಅಭಿಮಾನಿಗಳು ತೀವ್ರ ನಿರಾಸೆಗೊಳಗಾಗಿದ್ದಾರೆ.

ಒಬ್ಬ ವಿಕೆಟ್ ಕೀಪರ್, ಓಪನರ್, ನಾಯಕ ಹೀಗೆ ಎಲ್ಲಾ ಪಾತ್ರ ನಿಭಾಯಿಸಬಲ್ಲ ರಾಹುಲ್ ರನ್ನು ಆರ್ ಸಿಬಿ ಕಡೆಗಣಿಸಿದ್ದುಯಾಕೆ ಎಂಬುದಕ್ಕೆ ಈಗ ಕಾರಣ ಬಯಲಾಗಿದೆ. ಇದನ್ನು ತಿಳಿದರೆ ನೀವು ಖಂಡಿತಾ ನಿರಾಸೆಗೊಳಗಾಗುತ್ತೀರಿ. ಆರ್ ಸಿಬಿ ಕೆಎಲ್ ರಾಹುಲ್ ಗಾಗಿ ಕೇವಲ 7 ಕೋಟಿ ರೂ. ಖರ್ಚು ಮಾಡಲು ನಿರ್ಧರಿಸಿತ್ತಂತೆ.

ಹೀಗಾಗಿ ತಾವು ನಿರ್ಧರಿಸಿದ ಮೊತ್ತ ದಾಟುತ್ತಿದ್ದಂತೇ ಆರ್ ಸಿಬಿ ಬಿಡ್ಡಿಂಗ್ ನಿಂದಲೇ ಹಿಂದೆ ಸರಿಯಿತು. ಅಚ್ಚರಿಯಿಂದರೆ ಅಷ್ಟೇನೂ ಅನುಭವಿಯಲ್ಲದ ಜಿತೇಶ್ ಶರ್ಮಾಗೂ ಆರ್ ಸಿಬಿ 11 ಕೋಟಿ ಕೊಟ್ಟು ಖರೀದಿ ಮಾಡಿತ್ತು. ಆದರೆ ರಾಹುಲ್ ಗೆ ಕೇವಲ 7 ಕೋಟಿ ರೂ. ಮೀಸಲಿಟ್ಟಿತ್ತು ಎನ್ನುವುದು ನಿಜಕ್ಕೂ ನಿರಾಶಾದಾಯಕ ವಿಚಾರವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ