ಕಿವೀಸ್ ಪಡೆಯಲ್ಲಿ ಸುರುವಾಗಿದೆ ನಡುಕ

ಸೋಮವಾರ, 12 ಸೆಪ್ಟಂಬರ್ 2016 (11:18 IST)
3 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲು ಭಾರತಕ್ಕೆ ಆಗಮಿಸುತ್ತಿರುವ ನ್ಯೂಜಿಲೆಂಡ್ ಪಡೆಗೆ ಈಗಾಗಲೇ ನಡುಕ ಆರಂಭವಾಗಿದೆ. 
ಅದಕ್ಕೆ ಕಾರಣ ಏಷ್ಯನ್ ನೆಲದಲ್ಲಿ ಅವರು ಸ್ಪಿನರ್‌ಗಳ ಎಸೆತಕ್ಕೆ ಪರದಾಡುವುದು. 

 
ಹೌದು, ಕಿವೀಸ್ ತಂಡದ ಬಹುತೇಕ ಬ್ಯಾಟ್ಸಮನ್ ಭಾರತೀಯ ಸ್ಪಿನ್ನರ್‌ಗಳಿಗೆ ಪರದಾಡುತ್ತಾರೆ. 2012ರಲ್ಲಿ ಭಾರತ ತಂಡದ ಪ್ರವಾಸ ಮಾಡಿದಾಗ ಇದು ಸ್ಪಷ್ಟವಾಗಿ ಸಾಬೀತಾಗಿತ್ತು.  
 
ದಿಗ್ಗಜ ತ್ರಿಮೂರ್ತಿಗಳು ಸೇರಿದಂತೆ ಅತಿಥಿ ತಂಡದ ಪೌರುಷ ಕೊಹ್ಲಿ ಪಡೆ ಎದುರು ನಡೆಯಲ್ಲ. ಭಾರತದ ಸ್ಪಿನ್ ಬೌಲಿಂಗ್‌ ನೆನೆಸಿಕೊಂಡಿಯೇ ಅವರು ಬೆಚ್ಚಿ ಬೀಳುತ್ತಿದ್ದಾರೆ. 
 
ನಾಯಕ ವಿಲಿಯಮ್ಸನ್ ಕಳೆದ ಬಾರಿ ಭಾರತದ ವಿರುದ್ಧದ 3 ಟೆಸ್ಟ್ ಪಂದ್ಯಗಳಳ್ಲಿ ಮೂರು ಬಾರಿ ಸಹ ಸ್ಪಿನ್ನರ್‌ಗಳಿಗೆ ವಿಕೆಟ್ ಒಪ್ಪಿಸಿದ್ದರು. ಸ್ಟಾರ್ ಬ್ಯಾಟ್ಸ‌ಮನ್ ರಾಸ್ ಟೇಲರ್ ಭಾರತದ ವಿರುದ್ಧ 5 ಟೆಸ್ಟ್ ಪಂದ್ಯಗಳಲ್ಲಿ 5 ಬಾರಿಯೂ ಸ್ಪಿನ್ನರ್‌ಗಳಿಗೆ ಬಲಿಯಾಗಿದ್ದರು. 
 
ಸ್ಪೋಟಕ ಬ್ಯಾಟ್ಸ್‌ಮನ್ ಮಾರ್ಟಿನ್ ಗಪ್ಟಿಲ್ ಕಥೆಯೂ ವಿಭಿನ್ನವಾಗಿಲ್ಲ. ಭಾರತದ ವಿರುದ್ಧದ 4 ಟೆಸ್ಟ್ ಪಂದ್ಯಗಳಲ್ಲಿ 6 ಬಾರಿ ಅವರು ಸ್ಪಿನ್ನರ್‌ಗಳಿಂದಲೇ ಪೆವಿಲಿಯನ್‌ಗೆ ಮರಳಿದ್ದಾರೆ. 
 
ಸದ್ಯ ಟೀಮ್ ಇಂಡಿಯಾ ಪರ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡುತ್ತಿರುವ ಅಶ್ವಿನ್ ಬಗೆಗೆ ನೆನೆಸಿಕೊಂಡೆ ಕಿವೀಸ್ ದಾಂಡಿಗರು ಉಗುಳು ನುಂಗುತ್ತಿದ್ದಾರೆ. 
 
ಅಶ್ವಿನ್ ಮ್ಯಾಜಿಕ್‌ಗೆ ಕಿವೀಸ್ ಉಡೀಸ್ ಆಗತ್ತೆ ಎನ್ನುವುದು ಭಾರತೀಯ ಅಭಿಮಾನಿಗಳ ನಿರೀಕ್ಷೆ. ಅವರ ಕೈಚಳಕಕ್ಕೆ ಕಿವೀಸ್ ಆಟಗಾರರು ಪೆವಿಲಿಯನ್ ಪರೇಡ್ ಮಾಡುವುದನ್ನು ನೋಡಲು ಅವರು ಕಾತರಿಸುತ್ತಿದ್ದಾರೆ. 
 
ಒಟ್ಟಿನಲ್ಲಿ ಭಾರತೀಯ ಸ್ಪಿನ್ನರ್‌ಗಳು ಸಹ ನ್ಯೂಜಿಲೆಂಡ್‌ ಪಾಲಿಗೆ ವಿಲನ್‌ಗಳಾಗೋಕೆ ತುದಿಗಾಲಲ್ಲಿ ನಿಂತಿದ್ದಾರೆ ಎನ್ನುವುದು ಸುಳ್ಳಲ್ಲ. 

ವೆಬ್ದುನಿಯಾವನ್ನು ಓದಿ