ವಿಶ್ವಕಪ್ ನಂತರ ಟೀಂ ಇಂಡಿಯಾ ಕೋಚ್ ಸ್ಥಾನದಿಂದ ದ್ರಾವಿಡ್ ಹೊರಹೋಗಬೇಕೇ?

ಶನಿವಾರ, 28 ಅಕ್ಟೋಬರ್ 2023 (08:50 IST)
ಮುಂಬೈ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಟೀಂ ಇಂಡಿಯಾ ಯಶಸ್ಸಿಗೆ ಕೋಚ್ ರಾಹುಲ್ ದ್ರಾವಿಡ್ ಕೂಡಾ ಕಾರಣ.

ಆದರೆ ದ್ರಾವಿಡ್ ಕೋಚಿಂಗ್ ಅವಧಿಯ ಗುತ್ತಿಗೆ ವಿಶ್ವಕಪ್ ನಂತರ ಮುಗಿಯಲಿದೆ. ಇದುವರೆಗೆ ದ್ರಾವಿಡ್ ಪುನರಾಯ್ಕೆ ಬಯಸಿ ಅರ್ಜಿ ಸಲ್ಲಿಸಿಲ್ಲ. ಹೀಗಾಗಿ ವಿಶ್ವಕಪ್ ಬಳಿಕ ದ್ರಾವಿಡ್ ಮುಂದುವರಿಯುವುದು ಅನುಮಾನ ಎಂಬ ಅನುಮಾನವಿದೆ. ಸ್ವತಃ ಬಿಸಿಸಿಐಗೆ ದ್ರಾವಿಡ್ ರನ್ನು ಮುಂದುವರಿಸಲು ಆಸಕ್ತಿಯಿದ್ದರೂ ಅವರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ನೋಡಬೇಕಿದೆ.

ಒಂದು ವೇಳೆ ದ್ರಾವಿಡ್ ಪುನರಾಯ್ಕೆ ಬಯಸಿ ಅರ್ಜಿ ಸಲ್ಲಿಸಿದರೆ ಬಿಸಿಸಿಐ ಮೊದಲ ಆಯ್ಕೆ ಅವರೇ ಆಗಿರುತ್ತಾರೆ. ಇಲ್ಲದೇ ಹೋದರೆ ಮುಂದಿನ ಆಯ್ಕೆ ಬಗ್ಗೆ ಯೋಚಿಸಲಿದೆ. ಸದ್ಯಕ್ಕೆ ವಿಶ್ವಕಪ್ ಮುಗಿದ ಬಳಿಕ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ವಿವಿಎಸ್ ಲಕ್ಷ್ಮಣ್ ಕೋಚ್ ಆಗುವುದು ಬಹುತೇಕ ಖಚಿತ. ಹೀಗಾಗಿ ದ್ರಾವಿಡ್ ನಿರಾಸಕ್ತಿ ತೋರಿದರೆ ಲಕ್ಷ್ಮಣ್ ಟೀಂ ಇಂಡಿಯಾ ಖಾಯಂ ಕೋಚ್ ಆಗಿ ಮುಂದುವರಿಯುವ ಸಾಧ‍್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ