ಅಂಡರ್ 19 ವಿಶ್ವಕಪ್‌‌ನಲ್ಲಿ ವಿಂಡೀಸ್‌ ಚೊಚ್ಚಲ ಚಾಂಪಿಯನ್

ಭಾನುವಾರ, 14 ಫೆಬ್ರವರಿ 2016 (17:38 IST)
ಬಾಂಗ್ಲಾದೇಶದ ಮಿರ್‌ಪುರದಲ್ಲಿ ನಡೆದ ವಿಶ್ವಕಪ್ ಅಂಡರ್ 19 ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ವೆಸ್ಟ್ ಇಂಡೀಸ್ 5 ವಿಕೆಟ್ ರೋಚಕ ಜಯ ಗಳಿಸಿ ಚಾಂಪಿಯನ್ಸ್ ಆಗಿ ಹೊರಹೊಮ್ಮಿದೆ. ವಿಂಡೀಸ್ ಪರ ಕಾರ್ಟೆ-ಪೌಲೆ ಉತ್ತಮ ಜತೆಯಾಟದಿಂದ ಭಾರತದ ಸ್ಕೋರಿನ ಗಡಿಯನ್ನು ವಿಂಡೀಸ್ ತಲುಪಿತು.  ಭಾರತ 45.1 ಓವರುಗಳಲ್ಲಿ ಕೇವಲ 145 ರನ್‌ಗಳಿಗೆ ಆಲೌಟ್‌ ಆಗಿದ್ದು ಭಾರತದ ಸೋಲಿಗೆ ಕಾರಣವಾಯಿತು.  ಸರ್ಫ್ರಾಜ್ ಖಾನ್ ಅವರು ಅರ್ಧಶತಕ ಬಾರಿಸಿದ್ದನ್ನು ಬಿಟ್ಟರೆ ಉಳಿದ ಆಟಗಾರರು ಸರಿಯಾಗಿ ಆಡದೇ ಬೇಗನೇ ಪೆವಿಲಿಯನ್‌ಗೆ ಹಿಂತಿರುಗಿದರು.
 
 ವೆಸ್ಟ್‌ಇಂಡೀಸ್ ತಂಡವು ಮನೋಜ್ಞ ಬೌಲಿಂಗ್ ಪ್ರದರ್ಶನ ನೀಡಿ ಚೊಚ್ಚಲ ಅಂಡರ್ 19 ವಿಶ್ವಕಪ್ ಗೆದ್ದಿದೆ. ಶೇರ್ ಎ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಭಾರತ ರಯಾನ್ ಜಾನ್ ಅವರ 3 ವಿಕೆಟ್ ಮತ್ತು ಅಲ್ ಜಾರಿ ಜೋಸೆಫ್ ಅವರ 3 ವಿಕೆಟ್ ನೆರವಿನಿಂದ ಭಾರತ ಕೇವಲ 145 ರನ್‌ಗೆ ಔಟಾಯಿತು.

 ಭಾರತದ 145 ಸ್ಕೋರ್ ಬೆನ್ನಟ್ಟಿದ ವೆಸ್ಟ್ ಇಂಡೀಸ್ ಪರ ಕೀಚಿ ಕಾರ್ಟಿ ಕೀಮೋ ಪಾಲ್( 40 ಅಜೇಯ) ಜತೆ  ಕೀಚಿ ಕಾರ್ಟಿ ಅಜೇಯ 52 ರನ್ ಬಾರಿಸಿ ಗೆಲುವು ದೊರಕಿಸಿಕೊಟ್ಟರು. 
 
 ಆರಂಭದಲ್ಲಿ ಬ್ಯಾಟಿಂಗ್ ಮಾಡಿದ ಭಾರತ ತಂಡ ನಾಲ್ಕನೇ ಎಸೆತದಲ್ಲಿ ರಿಷಬ್ ಪಂತ್ ವಿಕೆಟ್ ಕಳೆದುಕೊಂಡಿತು. ಪೇಸರ್‌ಗಳು ತಮ್ಮ ಬೌಲಿಂಗ್ ಕೈಚಳಕದಿಂದ ಬ್ಯಾಟ್ಸ್‌ಮನ್‌ಗಳು ಸ್ಕೋರ್ ಮಾಡುವುದು ಕಷ್ಟವೆನಿಸಿತು.
 
 ನಾಲ್ಕು ಓವರುಗಳು ಮುಗಿಯುವಷ್ಟರಲ್ಲಿ 3ನೇ ಕ್ರಮಾಂಕದ ಅಮ್ಮೋಲ್ ಪ್ರೀತ್ ಸಿಂಗ್ ಮತ್ತು ನಾಯಕ ಇಷಾನ್ ಕಿಶನ್ ಕೂಡ ಔಟಾಗಿದ್ದರಿಂದ ಭಾರತ 3 ವಿಕೆಟ್ ಕಳೆದುಕೊಂಡು 27 ರನ್ ಗಳಿಸಿತ್ತು.  ಸರ್ಫ್ರಾಜ್ ಖಾನ್ ಅವರು ಸುಂದರ್ ಜತೆಗೂಡಿ ಸ್ಕೋರ್ ವೇಗ ಹೆಚ್ಚಿಸಲು ಮುಂದಾದರೂ ಸುಂದರ್ ಮಿಡ್ ಆಫ್‌ನಲ್ಲಿ ಸರಳ ಕ್ಯಾಚ್ ಹಿಡಿದು ಔಟಾದರು. 
 ಸರ್ಫ್ರಾಜ್ ಒಬ್ಬರು ಮಾತ್ರ ಆಟದ ಮೇಲೆ ಗಮನ ಕೇಂದ್ರೀಕರಿಸಿ ಅರ್ಧಶತಕ ಬಾರಿಸಿದರು.  ಸರ್ಫ್ರಾಜ್  ಔಟಾದ ಬಳಿಕ ಉತ್ತಮ ಸ್ಕೋರ್ ದಾಖಲಿಸುವ ಭಾರತದ ಆಸೆ ಕಮರಿತು.
 
 

ವೆಬ್ದುನಿಯಾವನ್ನು ಓದಿ