ಫೆಬ್ರವರಿಯಲ್ಲಿ ವನಿತೆಯರ ಐಪಿಎಲ್

ಗುರುವಾರ, 7 ಡಿಸೆಂಬರ್ 2023 (12:50 IST)
Photo Courtesy: Twitter
ಮುಂಬೈ: ಮಹಿಳೆಯರ ಪ್ರೀಮಿಯರ್ ಲೀಗ್ ಡಬ್ಲ್ಯುಪಿಎಲ್ ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯಲಿದೆ ಎಂದು ಐಪಿಎಲ್ ಆಡಳಿತ ಮಂಡಳಿ ಅಧ‍್ಯಕ್ಷ ಅರುಣ್ ಧುಮಾಲ್ ಹೇಳಿದ್ದಾರೆ.

ಕಳೆದ ವರ್ಷ ಡಬ್ಲ್ಯುಪಿಎಲ್ ಮೊದಲ ಆವೃತ್ತಿ ನಡೆದಿತ್ತು. ಮೊದಲ ಆವೃತ್ತಿಯಲ್ಲಿ ಹರ್ಮನ್ ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್ ಡಬ್ಲ್ಯುಪಿಎಲ್ ಚಾಂಪಿಯನ್ ಆಗಿತ್ತು.

ಇದೀಗ ಡಬ್ಲ್ಯುಪಿಎಲ್ ಎರಡನೇ ಆವೃತ್ತಿ ನಡೆಯಲಿದೆ. ಇದೇ ಶನಿವಾರ ಮಹಿಳೆಯ ಪ್ರೀಮಿಯರ್ ಲೀಗ್ ಗೆ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ವೇಳೆ ಎರಡನೇ ಆವೃತ್ತಿ ನಡೆಯುವ ದಿನಾಂಕವೂ ನಿಗದಿಯಾಗುವ ಸಾಧ‍್ಯತೆಯಿದೆ.

ಕಳೆದ ಬಾರಿ ಕೇವಲ ಮುಂಬೈನಲ್ಲಿ ಮಾತ್ರ ಡಬ್ಲ್ಯುಪಿಎಲ್ ಪಂದ್ಯಾವಳಿ ನಡೆದಿತ್ತು. ಆದರೆ ಪುರುಷರ ಐಪಿಎಲ್ ನಂತೇ ಮಹಿಳೆಯರ ಐಪಿಎಲ್ ಕೂಡಾ ವಿವಿಧ ತಾಣಗಳಲ್ಲಿ ನಡೆಸಬೇಕು ಎಂಬ ಒತ್ತಾಯಗಳು ಕೇಳಿಬಂದಿವೆ. ಹೀಗಾಗಿ ಮಹಿಳಾ ಐಪಿಎಲ್ ಕೂಡಾ ವಿವಿಧ ತಾಣಗಳಲ್ಲಿ ನಡೆಯಲಿದೆಯೇ ಎಂದು ಶನಿವಾರವೇ ತೀರ್ಮಾನವಾಗುವ ಸಾಧ‍್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ