ವಿಶ್ವಕಪ್: ಸ್ಕಾಟ್‌ಲೆಂಡ್ ವಿರುದ್ಧ ಆಫ್ಘಾನಿಸ್ತಾನ ರೋಚಕ ಗೆಲುವು

ಗುರುವಾರ, 26 ಫೆಬ್ರವರಿ 2015 (13:18 IST)
ಆಫ್ಘಾನಿಸ್ತಾನ ಮತ್ತು ಸ್ಕಾಟ್‌ಲೆಂಡ್ ನಡುವೆ ಪೂಲ್ ಎ 17ನೇ  ವಿಶ್ವಕಪ್ ಪಂದ್ಯ ರೋಚಕ ತಿರುವು ಪಡೆದುಕೊಂಡು, ಸ್ಕಾಟ್‌ಲೆಂಡ್ ತಂಡದ 210 ರನ್ ಬೆನ್ನಟ್ಟಿದ ಆಫ್ಘಾನಿಸ್ತಾನ ಇನ್ನೂ 3 ಎಸೆತಗಳು ಬಾಕಿವುಳಿದಿರುವಂತೆ 9 ವಿಕೆಟ್‌ಗೆ 211 ರನ್ ಗಳಿಸಿ ಗುರಿಯನ್ನು ಮುಟ್ಟುವಲ್ಲಿ ಯಶಸ್ವಿಯಾಗಿದೆ.

ಡುನೆಡಿನ್ ಯೂನಿವರ್ಸಿಟಿ ಓವಲ್‌ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಆಫ್ಘಾನಿಸ್ತಾನದ ಪರ  ಜಾವೇದಿ ಅಹ್ಮದಿ ಅವರ 51 ಎಸೆತಗಳ 51 ಮತ್ತು ಸಮೀವುಲ್ಲಾ ಶೆನ್ವಾರಿ ಅವರ 147 ಎಸೆತಗಳಲ್ಲಿ 96 ರನ್ ನೆರವಿನಿಂದ ಆಫ್ಘಾನಿಸ್ತಾನ ಗುರಿ ಮುಟ್ಟಿತು.

ಶೆನ್ವಾರಿ ಅವರ ಸ್ಕೋರಿನಲ್ಲಿ 7 ಬೌಂಡರಿಗಳಿದ್ದವು.  ಒಂದು ಹಂತದಲ್ಲಿ ಆಫ್ಘಾನಿಸ್ತಾನ ಕೇವಲ 97 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿತ್ತು. ಆದರೆ ಶೆನ್ವಾರಿ ಉತ್ತಮವಾಗಿ ಆಡಿ  ಸ್ಕೋರನ್ನು ಯಶಸ್ವಿಯಾಗಿ ಮುಟ್ಟಿದರು.  ಕೊನೆಯಲ್ಲಿ ಹಮೀದ್ ಹಸನ್ 15 ರನ್ ಮತ್ತು ಶಪೂರ್ ಜದ್ರಾನ್ 12 ರನ್ ಮಾಡಿ ಅಜೇಯರಾಗಿ ಉಳಿದರು. 

ವೆಬ್ದುನಿಯಾವನ್ನು ಓದಿ